ದನಗಳ ಜಾತ್ರೆ

ತುರುವೇಕೆರೆ:

         ತಾಲೂಕಿನ ಚಂಡೂರುಪುರದಲ್ಲಿ ನೆಡೆಯುವ ಶ್ರೀ ಶಂಭುಲಿಂಗೇಶ್ವರ ಭಾರೀ ದನಗಳ ಜಾತ್ರೆ ದಿನದಿಂದ ದಿನಕ್ಕೆ ಸೊಗಡನ್ನು ಕಳೆದುಕೊಳ್ಳುತ್ತಿದ್ದರು ಈ ಬಾರಿ ಜಾತ್ರೆಯಲ್ಲಿ ದುಬಾರಿ ಬೆಲೆಯ ಉತ್ತಮ ರಾಸುಗಳಿಂದ ನೂರಾರು ರೈತರ ಗಮನ ಸೆಳೆಯುತ್ತಿದೆ.

           ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಜಾತ್ರೆ ಸುಮಾರು 7 ದಿನಗಳ ಕಾಲ ನೆಡೆಯಲಿದೆ. ವಿಶಾಲವಾದ ಜಾತ್ರ ಮೈದಾನದಲ್ಲಿ ಎತ್ತ ನೋಡಿದರೂ ಹಲವಾರು ರೀತಿಯ ಹಳ್ಳಿಕಾರು ತಳಿ, ಅಮೃತಮಹಲ್, ಹಳ್ಳಿ, ರಾಣಿ, ಬಿಳಿ, ಕಪ್ಪು, ರೂಪಾಯಿ ಬಣ್ಣದ ಎತ್ತುಗಳು, ಅಪ್ಪಟ ನಾಟಿಹಸುಗಳು ಮಾರಾಟವಾಗಲಿವೆ.

           ಪ್ರತಿ ವರ್ಷ ಜನವರಿಯಲ್ಲಿ ನೆಡೆಯುವ ಜಾತ್ರೆಗೆ ತುಮಕೂರು, ಮಂಡ್ಯ, ದೊಡ್ಡಬಳ್ಳಪುರ, ಕೋಲಾರ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಇನ್ನು ಆನೇಕ ಜಿಲೆಗಳಿಂದ ಎತ್ತುಗಳೊಂದಿಗೆ ರೈತರು ಆಗಮಿಸಲಿದ್ದಾರೆ. ಜಾತ್ರೆಯಲ್ಲಿ ಹಾಲು ಕೊಡುವ ಹಸುಗಳು, ಹೊಲ ಉಳುವ ಎತ್ತುಗಳನ್ನು ಮಾತ್ರ ಮಾರಾಟ ಖರೀದಿ ನೆಡೆಯುತ್ತದೆ. ಸುಮಾರು 50 ಸಾವಿರದಿಂದ 3 ಲಕ್ಷದ ವರಗೆ ದನಗಳು ಮಾರಾಟವಾಗುತ್ತವೆ.

           ರೈತರು ದಳ್ಳಾಳಿಗಳು ದನಗಳನ್ನು ಮಾರಾಟ ಹಾಗೂ ಖರೀದಿ ನೆಡೆಸುತ್ತಾರೆ. ಟವಲ್ ಒಳಗೆ ಕೈಹಾಕಿ ರೈತರ ವ್ಯಾಪರ ಮಾಡುವ ಕಲೆ ಬಹಳ ಅಶ್ಚರ್ಯವಾಗಿರುತ್ತದೆ. ಜಾತ್ರೆಯಲ್ಲಿ ದನಗಳಿಗೆ ಅಲಂಕಾರಿಕ ವಸ್ತುಗಳು, ಸಿಹಿ ತಿಂಡಿ ಅಂಗಡಿಗಳು, ಸಸ್ಯಹಾರಿ ಹಾಗೂ ಮಾಂಸಹಾರಿ ಹೋಟಲ್‍ಗಳಿದ್ದು ಜನರ ಹಸಿವು ನೀಗಿಸಲಿವೆ. ವ್ಯಾಪಾರಿಗಳು ಸಹ ಜೋರಾದ ವ್ಯಾಪಾರ ನಡೆಸುತ್ತಿದ್ದು ಉತ್ತಮ ಲಾಬದ ನಿರೀಕ್ಷೆಯಲ್ಲಿದ್ದಾರೆ.

          ಜಾತ್ರ ಆವರಣ ಮರ ಗಿಡಗಳಿಂದ ಕೂಡಿದ್ದು ನೆರಳಿನ ಸೌಕರ್ಯವಿದೆ. ಪಶು ಇಲಾಖೆಯಿಂದ ಪಶು ಆಸ್ಪತ್ರೆ ಮಾಡಲಾಗಿದೆ. ಕುಡಿಯುವ ನೀರು, ಬೆಳಕು ಗ್ರಾಮ ಪಂಚಾಯ್ತಿಯಿಂದ ಮೂಲ ಸೌಕರ್ಯಗಳನ್ನು ಕಲ್ಪಿಸಿ ಪ್ರತಿದಿನ ರಾತ್ರಿ ಮನರಂಜನೆಯ ಸಂಗಮವಾಗಿರುತ್ತದೆ ಪೌರಾಣಿಕ ನಾಟಕಗಳು, ದೇವರ ಉತ್ಸವ, ಸಾಂಸೃತಿಕ ಕಾರ್ಯಕ್ರಮಗಳನ್ನು ರೈತರಿಗಾಗಿ ಏರ್ಪಡಿಸಲಾಗುತ್ತದೆ. ಜಾತ್ರೆಯಲ್ಲಿ ಎಲ್ಲಾ ರೀತಿಯ ಕರಕುಶಲ ವಸ್ತುಗಳ ಕೃಷಿ ಉಪಕರಣಗಳ ಪ್ರದರ್ಶನ ಮಾರಾಟ ನೆಡೆಯುತ್ತವೆ, ಉತ್ತಮ ರಾಸುಗಳನ್ನು ಗುರುತಿಸಿ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap