ಕಾಂಗ್ರೇಸ್ ಪಕ್ಷದಿಂದ ಅಗಲಿದ ಮಾಜಿ ಶಾಸಕ ಎಂ.ಪಿ.ರವೀಂದ್ರರವರಿಗೆ ಶ್ರದ್ದಾಂಜಲಿ

ಹರಪನಹಳ್ಳಿ

          ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಶನಿವಾರ ತಾಲೂಕು ಕಾಂಗ್ರೆಸ್ ಪಕ್ಷದಿಂದ ಅಗಲಿದ ಮಾಜಿ ಶಾಸಕ ಎಂ.ಪಿ.ರವೀಂದ್ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಲಾಯಿತು.

         ಈ ವೇಳೆ ಕಾಂಗ್ರೆಸ ಹಿರಿಯ ಮುಖಂಡ ಟಿ.ಎಚ್.ಎಂ.ವೀರುಪಾಕ್ಷಯ್ಯ ಮಾತನಾಡಿ ಹುಟ್ಟು ಸಾವು ಸಹಜ ಈ ನಡುವೆ ಹೆಸರನ್ನು ನಿರಂತರವಾಗಿ ಉಳಿಯುವಂತೆ ಮಾಡಿದವರನ್ನು ಚಿರಂಜಿವಿ ಎನ್ನುತ್ತೇವೆ ಅಂತವರ ಹೆಸರಿಗೆ ಮಾಜಿ ಶಾಸಕ ಎಂ.ಪಿ.ರವೀಂದ್ರರವರು ಸೇರಿದ್ದು ಅವರ ತಂದೆಯ ಮೂಲಕ ನಮಗೆ ಪರಿಚಿತರಾಗಿ, ನಂತರ ಶಾಸಕರಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಯತ್ನಿಸಿದ್ದಾರೆ ಎಂದರು.

         ನಿರಂತರವಾಗಿ ತಾಲೂಕಿನ ಜನರ ಕೆಲಸಗಳಿಗೆ ಹೆಚ್ಚು ಒತ್ತು ನೀಡಿದ್ದು, ಅವರು ಮಾಡಿದಂತಹ ಕೆಲಸ ಯಾರು ಮಾಡಿಲ್ಲ. ಅನೇಕ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದು ಜತೆಗೆ ಪಕ್ಷಕ್ಕೆ ಜವಾಬ್ದಾರಿ ಹೊಂದುವ ಮೂಲಕ ಬದ್ದರಾಗಿದ್ದರು. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದರು. ಬಡವರ ಪರವಾಗಿ, ಯುವಕರ ಪರವಾಗಿ ನಿಲ್ಲುತ್ತಿದ್ದರು. ಅವರ ಅಗಲಿಕೆಯಿಂದ ತಾಲೂಕಿಗೆ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದ್ದು ಇಂತಹ ವ್ಯಕ್ತಿ ಸಿಗ್ತಾರೋ ಇಲ್ಲ ನಮ್ಮ ದೌರ್ಬಗ್ಯವಾಗಿದೆ ಎಂದು ಹೆಳಿದರು.

        ಕೆಪಿಸಿಸಿ ಕಾರ್ಯದರ್ಶಿ ಚಂದ್ರಶೇಖರ ಭಟ್ ಮಾತನಾಡಿ ನಾವಿಬ್ಬರು ಪಕ್ಷದಲ್ಲಿ ಟೀಕೆಟ್ ಸ್ಪರ್ಧಿಗಳಾಗಿದ್ದರು ಕೂಡ ಪರಸ್ಪರ ಆರೋಗ್ಯಪೂರ್ಣವಾಗಿರುವಂತಹ ವಿಚಾರಗಳನ್ನು ಚರ್ಚಿಸುತ್ತಿದ್ದೇವು. ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇತ್ತು. ಸ್ನೇಹಕ್ಕೆ ಬೆಲೆ ಕೊಡುತ್ತಿದ್ದರು. ವರ್ಣರಂಜಿತ ವ್ಯಕ್ತಿಯಾಗಿದ್ದರು. ವಿಶ್ವಾಸರ್ಹ ಕೆಲಸಗಳನ್ನು ಹರಪನಹಳ್ಳಿಯಲ್ಲಿ ಮಾಡಿದ್ದು ಅವರ ಅಕಾಲಿಕ ಮರಣದಿಂದ ಪಕ್ಷಕ್ಕೆ ಸಾಕಷ್ಟು ನಷ್ಟವಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

        ಜಿಪಂ ಸದಸ್ಯ ಎಚ್ ಬಿ ಪರಶುರಾಮಪ್ಪ ಮಾತನಾಡಿ ಅವರ ಮೂರು ಕನಸ್ಸುಗಳನ್ನು ಈಡೇರಿಸುವಲ್ಲಿ ಸಫಲರಾಗಿದ್ದಾರೆ. ಯಾರಿಗೇ ಆಗಲಿ ಸತ್ಯವಾಗಿ ನೇರವಾಗಿ ನುಡಿಯುತ್ತಿದ್ದರು. ಇಂತಹವರು ಸಾವಿರ ವರ್ಷ ಉಳಿಯುವವರ ಸಾಲಿಗೆ ಸೇರಿದ್ದಾರೆ. ಶಾಸ್ವತ ಕೆಲಸಗಳಿಗೆ ಹೆಚ್ಚು ಒತ್ತು ನೀಡಿದ್ದರು. ಜಾತಿ ರಹಿತ ರಾಜಕಾರಣಿ ಮಾಡಿದರು ಮಾತಿನಂತೆ ನಡೆದುಕೊಂಡು ಪ್ರೀತಿಯಿಂದ ದೊಡ್ಡ ನಾಯಕರಾಗಿದ್ದು ಜನತೆಗೆ, ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದರು.

         ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪ್ರಕಾಶ್ ಅವರು ತಾಲೂಕಿನ ಕೆರೆಗಳನ್ನು ತುಂಬಿಸುವುದು, 371ಜೆ ಸೌಲಭ್ಯ ಒದಗಿಸುವುದು ಹಾಗೂ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಶ್ರಮಿಸಿದ್ದು ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಎಂ.ಪಿ.ರವೀಂದ್ರ ಎಂದು ನಾಮಕರಣ ಮಾಡಲು ಸರಕಾರ ಮುಂದಾಗಬೇಕು ಎಂದರು.

        ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಲೂರು ಅಂಜಪ್ಪ, ವಕೀಲ ಚಂದ್ರೇಗೌಡ, ಎಡಿಬಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಮೊಹನರೆಡ್ಡಿ, ವಕೀಲ ವೆಂಕಟೇಶ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

         ಸಾಸ್ವಿಹಳ್ಳಿ ಚನ್ನಬಸವನಗೌಡ್ರು, ತಾಪಂ ಸದಸ್ಯರಾದ ಎಚ್.ಚಂದ್ರಪ್ಪ, ಓ.ರಾಮಪ್ಪ, ಪುರಸಭಾ ಸದಸ್ಯ ಅರುಣ ಪಿ, ಮುಖಂಡರಾದ ಸಾಬಳ್ಳಿ ಜಂಬಣ್ಣ, ಶಶಿಧರ ಪೂಜಾರ, ಹಲಗೇರಿ ಮಂಜಣ್ಣ, ಪಿ.ಶಿವಕುಮಾರ್, ಜಾಕೀರ್, ಪ್ರೇಮಾಕುಮಾರ, ಅಂಬ್ಲಿ ಮಂಜುನಾಥ, ಸುನಿಲ್ ಕುಮಾರ ಬಿದರಿ, ವೇದುನಾಯ್ಕ, ಸೇರಿದಂತೆ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap