ಮಹರ್ಷಿ ಶ್ರೀವಾಲ್ಮೀಕಿ ರಾಮಾಯಣ ಗ್ರಂಥ ಮನುಕುಲ ಜ್ಞಾನ ಜ್ಯೋತಿ- ವೀರೇಂದ್ರಸಿಂಹ ಅಭಿಮತ

0
14

ಚಳ್ಳಕೆರೆ

       ಸಮಾಜದಲ್ಲಿ ತುಂಬಿದ್ದ ಅಜ್ಞಾನದ ಕತ್ತಲನ್ನು ರಾಮಾಯಣದ ಮೂಲಕ ಜ್ಞಾನದ ಬೆಳಕನ್ನು ಜನತೆಗೆ ನೀಡಿದ ಮಹಾನ್ ಗ್ರಂಥವಾಗಿದೆ. ಇಂತಹ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ಸವiಸ್ತ ಮನುಕುಲದ ಜ್ಞಾನ ಜ್ಯೋತಿಯಾಗಿದ್ಧಾರೆಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಕಾರ್ಯದರ್ಶಿ, ನಿವೃತ್ತ ಜೈಲಾಧಿಕಾರಿ ಹರ್ತಿಕೋಟೆ ವೀರೇಂದ್ರ ಸಿಂಹ ತಿಳಿಸಿದರು.

       ಅವರು, ಗುರುವಾರ ಇಲ್ಲಿನ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮದ ಶ್ರೀವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ಎಲ್ಲೆಡೆ ವಾಲ್ಮೀಕಿ ರಚಿಸಿದ ರಾಮಾಯಣದ ವಿಚಾರ ಧಾರೆಗಳನ್ನು ಸಂಪೂರ್ಣವಾಗಿ ತಿಳಿಯಲು ಉಪಯುಕ್ತವಾಗುತ್ತಿದೆ ಎಂದರು.

      ತಾಲ್ಲೂಕು ವಾಲ್ಮೀಕಿ ವiಹಾಸಭದ ಅಧ್ಯಕ್ಷ, ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಬಿ.ತಿಪ್ಪೇಸ್ವಾಮಿ ಮಾತನಾಡಿ, ನಾಡಿನೆಲ್ಲೆಡೆ ಶ್ರೀವಾಲ್ಮೀಕಿ ಜಯಂತಿಯನ್ನು ಎಲ್ಲಾ ಸಮುದಾಯದವರೂ ಸ್ವಯಂ ಪ್ರೇರಣೆಯಿಂದ ಆಚರಿಸುವಂತಾಗಿದೆ. ರಾಮಾಯಣದಲ್ಲಿ ಬಿಂಬಿತವಾಗಿರುವ ಎಲ್ಲಾ ವಿಚಾರಗಳು ಅರ್ಥಪೂರ್ಣವಾಗಿದ್ದು, ಇವುಗಳನ್ನು ತಿಳಿದುಕೊಂಡಲ್ಲಿ ಮಾತ್ರ ವ್ಯಕ್ತಿಯ ಜೀವನ ಸಾರ್ಥಕತೆಯತ್ತ ಸಾಗುತ್ತದೆ ಎಂದರು.

        ಪ್ರಾಸ್ತಾವಿಕವಾಗಿ ಮಾತನಾಡಿದ ಖ್ಯಾತ ಲೇಖಕ ಹಾಗೂ ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ, ಕಳೆದ ಸುಮಾರು 30 ವರ್ಷಗಳಿಂದ ಗ್ರಾಮೀಣ ಜನರಲ್ಲಿ ಸಾಹಿತ್ಯದ ಸದಭಿರುಚಿಯನ್ನು ಬೆಳೆಸಲು ಗ್ರಾಮೀಣ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಹರ್ಷಿ ಶ್ರೀವಾಲ್ಮೀಕಿಯವರ ವಿಚಾರಧಾರೆಗಳನ್ನು ಗ್ರಾಮೀಣ ಜನರಿಗೆ ಮತ್ತಷ್ಟು ಅರ್ಥಪೂರ್ಣವಾಗಿ ತಿಳಿಸಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಜನತೆ ವಾಲ್ಮೀಕಿಯವರ ರಾಮಾಯಣದ ಬಗ್ಗೆ ಅಪಾರವಾದ ವಿಶ್ವಾಸ, ಗೌರವ ಹಾಗೂ ನಂಬಿಕೆಯನ್ನು ಇಟ್ಟಿದ್ಧಾರೆ. ಇದು ಎಂದಿಗೂ ಮಾಸದಂತಹ, ಮರೆಯಾಗದಂತಹ ವಿಷಯ ಎಂದರು.

         ಕಾರ್ಯಕ್ರಮದಲ್ಲಿ ಶಿಕ್ಷಕ ಬಸವರಾಜು, ಹಂಪಣ್ಣ, ಚಿತ್ತಯ್ಯ, ನರಸಿಂಹಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಹೆಸರಿನ ನಾಮಫಲಕವನ್ನು ಉದ್ಘಾಟಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here