ದಂತ ಚೋರರ ಬಂಧನ

ಬೆಂಗಳೂರು

      ಅರಣ್ಯದಲ್ಲಿ ಸಾವನ್ನಪ್ಪಿದ್ದ ಆನೆಯ ಮೃತದೇಹದಿಂದ ದಂತಗಳನ್ನು ಯಾರ ಗಮನಕ್ಕೂ ಬಾರದಂತೆ ಕತ್ತರಿಸಿಕೊಂಡು ಬಂದು ನಗರಕ್ಕೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

       ಹಾಸನ ಜಿಲ್ಲೆ ಮಾರನಹಳ್ಳಿಯ ನಾಗೇಶ್ ಅಲಿಯಾಸ್ ಜೈರಾಜು (48) ಕಡಗರವಳ್ಳಿಯ ಕೃಷ್ಣರಾಜು (54) ಹಾಗೂ ಹರಳಹಳ್ಳಿ ಪ್ರತಾಪ್ (27) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತ ಆರೋಪಿಗಳಿಂದ 15 ಕೆ.ಜಿ. ತೂಕದ ಎರಡು ಆನೆ ದಂತಗಳು ಹಾಗೂ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

      ಆರೋಪಿಗಳು ಹೆಬ್ಬಾಳ ಕೆರೆಯ ಗಣೇಶ ವಿಸರ್ಜನೆ ಮಾಡುವಾಗ ಕಲ್ಯಾಣಿ ಗೇಟ್ ಮುಂಭಾಗದ ರಿಂಗ್ ರಸ್ತೆಯಲ್ಲಿ ಆಟೋ ಕಾರಿನಲ್ಲಿ ಆನೆದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದಾಗ ಕಾರ್ಯಾಚರಣೆ ನಡೆಸಿದಾಗಿ ಕೊಡಗೇಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ಚೇತನ್ ಕುಮಾರ್ ಮತ್ತು ಅವರ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

      ಆರೋಪಿಗಳು ಕೃಷಿ ಕೂಲಿಕಾರರಾಗಿದ್ದು, ಸಕಲೇಶಪುರ ಅರಣ್ಯದಲ್ಲಿ ಮೃತಪಟ್ಟಿದ್ದ ಆನೆಯ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸದೆ ಸ್ಥಳೀಯರಿಗೂ ಗೊತ್ತಾಗದಂತೆ ಸಂಚು ರೂಪಿಸಿ, ದಂತಗಳನ್ನು ತೆಗೆದುಕೊಂಡು ಮೃತದೇಹವನ್ನು ಹೂತು ಹಾಕಿದ್ದರು.

      ದಂತಗಳನ್ನು ನಗರಕ್ಕೆ ಆಟೋ ಕಾರಿನಲ್ಲಿ ತೆಗೆದುಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap