ನೌಕರರ ಪ್ರತಿಭಟನೆ

0
9

ಹಾನಗಲ್ಲ :

       ಕೇಂದ್ರ ಸರಕಾರದ ಕಾರ್ಮಿಕ ವಿರೋದಿ ನೀತಿ ಖಂಡಿಸಿ ಎರಡು ದಿನಗಳ ಕಾಲ ಕರೆ ನೀಡಲಾಗಿದ್ದ ಭಾರತ್ ಬಂದ್‍ಗೆ ಹಾನಗಲ್ಲಿನಲ್ಲಿ ಬುಧವಾರ ಸಹಿತ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಯಿತು.

         ಬುಧವಾರ ಜೆಸಿಟಿಯು ನೇತೃತ್ವದಲ್ಲಿ ಆಶಾ ಕಾರ್ಯಕರ್ತಯರು, ಹಮಾಲರು ಹಾಗೂ ಪಂಚಾಯತಿ ನೌಕರರ ಸಂಘ ಬಿದಿಗೀಳಿದು ಪ್ರತಿಭಟನೆ ನಡೆಸಿದರು.

        ನಗರದ ಎನ್‍ಸಿಜೆಸಿ ಕಾಲೇಜಿನ ಆವರಣದಿಂದ ಹೋರಟ ಪ್ರತಿಭಟನಾ ಮೆರವಣಿಗೆ, ಪ್ರಮೂಖ ಬಿದಿಗಳ ಮುಖಾಂತರ ಕನಕದಾಸ ಸರ್ಕಲ್ ತಲುಪಿ ಕೇಂದ್ರ ಸರಕಾರದ ವಿರುದ್ದ ಘೊಷಣೆಗಳನ್ನು ಕೂಗುತ್ತ ನಂತರ ತಹಶಿಲ್ದಾರ ಎಮ್ ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

          ಮನವಿಯಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ತಡಗಟ್ಟಬೇಕು, ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಟಿಸುವುದು, 18 ಸಾವಿರ ಕನಿಷ್ಟ ಜಾರಿಮಾಡಬೇಕು, ಮತ್ತೊಮ್ಮೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು, ಸ್ಕೀಮ್ ನೌಕರರನ್ನು ಖಾಯಂ ಮಾಡಬೇಕು, ದೇಶದ ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಕೊಡಬೇಕು, ಕೃಷಿ ಬಿಕ್ಕಟ್ಟು ಹೆಚುತ್ತಿರುವ ರೈತರ ಆತ್ಮಹತ್ಯೆ ಆಗದಂತೆ ಡಾ.ಸ್ವಾಮಿನಾಥನ ಆಯೋಗ ಶಿಫಾರಸ್ಸಿನಂತೆ ರೈತರ ಬೆಲೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಲು ಮೋದಿ ಸರ್ಕಾರ ಮುಂದಾಗಬೇಕು. ಆಶಾ, ಅಂಗನವಾಡಿ ಹಗೂ ಹಮಾಲಿ ಕಾರ್ಯಕರ್ತರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

         ಪ್ರತಿಭಟನೆಯಲ್ಲಿ ಪಂಚಾಯತಿ ನೌಕರರ ಜಿಲ್ಲಾಧ್ಯಕ್ಷ ವಿ.ಕೆ.ಬಾಳಿಕಾಯಿ, ತಾಲೂಕು ಕಾರ್ಯದರ್ಶಿ ದಯಾನಂದ ಚೌಟಿ, ಅಣ್ಣಪ್ಪ ಚಿಕ್ಕಣ್ಣನವರ, ಟಿಎಚ್.ಕುರುಬರ, ಹೊನ್ನಪ್ಪ ಕುರುಬರ, ರಶೀದಖಾನ ಲಾಲಖಾನನವರ, ಸುನಿಲ ಎಚ್. ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪೂರಮಠ, ಲಕ್ಷ್ಮೀ ಕಬ್ಬೂರ, ಶೋಭಾ ಹೊಸಕೊಪ್ಪ, ಶೈಲಾ ಮಕರವಳ್ಳಿ, ಕಮಲಾಕ್ಷಿ ವರ್ದಿ, ಮೋದಿನಬಿ ಕಂಚಿನೆಗಳೂರ, ಸುನೀತಾ ನೀರಲಗಿ, ಸುಮಿತ್ರಾ ಗಾಳೆಮ್ಮನವರ ಮೊದಲಾದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here