ಅಪರಾಧ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ

0
17

ಚಿತ್ರದುರ್ಗ

        ಅಪರಾಧವಾದ ಬಳಿಕ ತನಿಖೆ ನಡೆಸುವುದು ನಮ್ಮ ಕರ್ತವ್ಯ,ಆದರೆ ಅಪರಾಧಗಳಾಗದಂತೆ ನಿಯಂತ್ರಿಸುವುದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಹೇಳಿದರು.

         ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚಾರಣೆ ಉದ್ಘಾಟಿಸಿ ಅವರು ಮಾತನಾಡಿದರು

        ಸಂಚಾರಿ ಸುವ್ಯವಸ್ಥೆ ಪಾಲನೆ,ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲೇ ಪೊಲೀಸರ ಶಕ್ತಿ ವ್ಯಯವಾದರೇ ಗಂಭೀರ ಪ್ರಕರಣಗಳ ತನಿಖೆಗಳಿಗೆ ಹಿನ್ನಡೆ ಆಗುತ್ತದೆ. ಆದ್ದರಿಂದ ಸಾರ್ವಜನಿಕರು ಅಪರಾಧಗಳ ತಡೆಗೆ ಸಹಕರಿಸಬೇಕು, ಒಂದು ವೇಳೆ ಅಪರಾಧಗಳಾದಲ್ಲಿ ತನಿಖೆಗೂ ನೆರವಾಗಬೇಕು. ಪದೆ ಪದೇ ಹೇಳಿಸಿಕೊಳ್ಳದೇ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸುವ ಮೂಲಕ ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ನಾಗರಿಕರು ಸಹಕರಿಸ ಬೇಕೆಂದರು.

       ಮದ್ಯದ ಅಕ್ರಮ ಮಾರಾಟ,ಮಾದಕ ವಸ್ತು ವ್ಯಸನ,ವ್ಯಕ್ತಿಗಳ ನಾಪತ್ತೆ ಮೊದಲಾದ ಅಪರಾಧ ಪ್ರಕರಣಗಳ ಕುರಿತಂತೆ ನಾಗರಿಕರು ಇಲಾಖೆಯೊಂದಿಗೆ ಸಹಕರಿಸಿದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೆ. ಆಟೋ,ಟ್ಯಾಕ್ಸಿ ಚಾಲಕರು ಸೇರಿದಂತೆ ನಾಗರಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸ ಬಹುದು. ಕಾನೂನು ಚೌಕಟ್ಟಿನಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

        .ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಆಗುವ ಮುನ್ನವೇ ಅಪರಾಧ ಆಗದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪರಾಧ ತಡೆಗೆ ಸಂಬಂಧಪಟ್ಟಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

         ಚಿತ್ರದುರ್ಗ ಉಪವಿಭಾಗದ ಡಿವೈಎಸ್ಪಿ ವಿಜಯಕುಮಾರ್ ಸಂತೋಷ್ ಮಾತನಾಡಿ,ತಪಾಸಣೆ ಮಾಡಿದರೆ ಅನೇಕ ಆಟೊ ಚಾಲಕರ ಬಳಿ ವಾಹನ ಚಾಲನ ಪರವಾನಗಿ ಇರುವುದಿಲ್ಲವೆಂಬ ಆಘಾತಕಾರಿ ಅಂಶವನ್ನು ಬಹಿರಂಗ ಪಡಿಸಿದರು. ಆದ್ದರಿಂದ ಸಾರಿಗೆ ಇಲಾಖೆ ಯೊಂದಿಗೆ ಮಾತನಾಡಿ,ಚಾಲಕರಿಗೆ ಎಲ್‍ಎಲ್‍ಆರ್/ಚಾಲನ ಪರವಾನಗಿ ವಿತರಣೆಗೆ ಹಾಗೂ ಎತ್ತಿನ ಗಾಡಿ,ಟ್ರಾೃಕ್ಟರ್‍ಗಳಿಗೆ ರಿಪ್ಲೆಕ್ಟರ್ ಅಳವಡಿಸಲು ಕ್ರಮ ವಹಿಸಲಾಗುವುದು.

       ಚಿತ್ರದುರ್ಗ ಅಸಿಸ್ಟೆಂಟ್ ಎಸ್ಪಿಯಾಗಿದ್ದ ಲಕ್ಷ್ಮಣ್ ನಿಂಬರಗಿ ಅವಧಿಯಲ್ಲಿ ಟ್ಯಾಕ್ಸಿ ಚಾಲಕರಿಗೆ ಕೊಡಲಾರಂಭಿಸಿದ್ದ ಡಿಸ್‍ಪ್ಲೇ ಕಾರ್ಡ್ ವಿತರಣೆ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಮಾಸಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ಠಾಣೆ ವ್ಯಾಪ್ತಿಗಳಲ್ಲಿ ಜಾಥಾ,ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದೆಂದರು.

        ಎಎಸ್ಪಿ ಡಾ.ರಾಮ್ ಲಕ್ಷ್ಮಣ ಅರಸಿದ್ಧಿ,ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ,ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಎಂ.ಡಿ.ಫೈಜುಲ್ಲಾ, ಶಿವ ಕುಮಾರ್,ಪ್ರಕಾಶ ಪಾಟೀಲ ಮೊದಲಾದ ಅಧಿಕಾರಿಗಳಿದ್ದರು. ಆಟೊ ಮತ್ತು ಟ್ಯಾಕ್ಸಿ ಚಾಲಕರು ಇದೇ ವೇಳೆ ಸಮಸ್ಯೆಗಳ ಕುರಿತಂತೆ ಎಸ್ಪಿ ಅವರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here