ಕಾಂಗ್ರೇಸ್ ಸಮ್ಮಿಶ್ರ ಸರಕಾರ ಸಂಪೂರ್ಣವಾಗಿ ವಿಫವಾಗಿದೆ

0
13

ಜಗಳೂರು :

       ರಾಜ್ಯದ್ಯಾಂತ 100ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ತಾಂಡವಾಡುತಿದ್ದು ಬರ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಕಾಂಗ್ರೇಸ್ ಸಮ್ಮಿಶ್ರ ಸರಕಾರ ಸಂಪೂರ್ಣವಾಗಿ ವಿಫವಾಗಿದೆ ಎಂದು ವಿಧಾನ ಪರಿಷತ್ ನ ವಿರೋದ ಪಕ್ಷದ ನಾಯಕ ಕೋಟ ಶ್ರೀ ನಿವಾಸ ಪೂಜಾರಿ ಗಂಭಿರವಾಗಿ ಆರೋಪಿಸಿದರು.

      ತಾಲೂಕಿನ ಗೋಡೆ ಗ್ರಾಮದ ಮುನಿಯಪ್ಪ ಎಂಬ ರೈತನ ಜಮಿನಿನಲ್ಲಿ ಮಳೆ ಸಂಪೂರ್ಣವಾಗಿ ಒಣಗಿ ಹೊಗಿರುವ ನುಗ್ಗೆ ಹಾಗೂ ಅಡಿಕೆ ತೋಟಕ್ಕೆ ಮಂಗಳವಾರ ಭೇಟಿ ನೀಡಿ ಪರಿಸಿಲನೆ ನಡೆಸಿದ ನಂತರ ಮಾತನಾಡಿದ ಮೇವು ಸಂಗ್ರಹಣೆ ಮಾಡಿ ಗೋಶಾಲೆಯನ್ನು ತೆರೆಯುವ ಆಸಕ್ತಿಯನ್ನು ರಾಜ್ಯ ಸರಕಾರ ತೋರುತ್ತಿಲ್ಲ. ಸರಕಾರದ ಕಾರ್ಯ ಯಾವ ರೀತಿ ಎಂದರೆ ಜಗಳೂರಿನಂತ ಬರದ ತಾಲೂಕಿನಲ್ಲಿ 200ಕ್ಕೂ ಅಧಿಕ ಹಳ್ಳಿಗಳಿವೆ. ಇದರಲ್ಲಿ 40 ಕ್ಕೂ ಅಧಿಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

      ನೀರಾವರಿ ಯೋಜನೆಗಳಿಗೆ ಒತ್ತು ನೀಡುತ್ತಿಲ್ಲ. ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇ ಎಂದು ಹೇಳಿದಂತೆ ಸರಕಾರ ಇಂದಿನವರೆ 10 ರೈತರಿಗೆ ಋಣ ಮುಕ್ತ ಪತ್ರವನ್ನು ನೀಡಿಲ್ಲ. ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಮದ್ಯೆ ಹೊಂದಾಣಿಕೆ ಕೊರತೆ ಯಿಂದ ನಾನೊಂದು ತೀರಾ ನೀನೊಂದು ತೀರಾ ಎಂಬಂತಾಗಿದ್ದು, ಯಾವುದೇ ಜನಪರ ಯೋಜನೆಗಳು ಜಾರಿಗೆ ಬಂದಿಲ್ಲ. ಅಲ್ಲದೇ ಯಾವುದೇ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಹೀಗಾದರೇ ಅಭಿವೃದ್ದಿ ಹೇಗೆ ಸಾಧ್ಯ ಎಂದರು. 10 ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ 1 ಲಕ್ಷಕ್ಕೂ ಅಧಿಕ ರೈತರಿಂದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

       ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ ನೂರುವರ್ಷದಲ್ಲಿ 76 ವರ್ಷಗಳ ಕಾಲ ಬರಗಾಲಕ್ಕೆ ತುತ್ತಗುತ್ತಿದ್ದು ಕುಡಿಯಲು ಸಹ ನಿರಿಲ್ಲದೇ ಪರದಾಡುವಂತ ಪರಿಸ್ಥಿತಿ ಇದೇ ಇಲ್ಲಿ ಯಾವುದೇ ನದಿ ಮೂಲಗಳಿಲ್ಲದೇ ಮಳೆಯನ್ನೆ ಆಶ್ರಯಿಸಿ ಜೀವನ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ ಇದುವರೆಗು ಗೋಶಾಲೆ ತೆರೆದಿಲ್ಲ. ಹಾಗೂ ಬರ ನಿರ್ವಹಣೆಯಲ್ಲಿ ಸರಕಾರ ವೈಫಲ್ಯವಾಗಿದೆ ಎಂದು ಹೇಳಿದರು
ಈ ಸಂಧರ್ಭದಲ್ಲಿ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವಿಂದ್ರನಾಥ್, ಮಾಯಕೊಂಡ ಶಾಸಕ ಪ್ರೋ . ಲಿಂಗಣ್ಣ, ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ರಮೇಶ್‍ನಾಯ್ಕ ,ತಾಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ, ಜಿ.ಪಂ ಸದಸ್ಯರಾದ ಶಾಂತಕುಮಾರಿ , ಗ್ರಾಮ ಪಂಚಾಯಿತಿ ಅಧ್ಯಕ್ಷ ಸಣ್ಣ ಗೌಡ, ತಹಶಿಲ್ದಾರ್ ಶ್ರೀಧರ್ ಮೂರ್ತಿ . ಆರ್.ಐ. ಅಜ್ಜಪ್ಪ ಪತ್ರಿ ,ರಾಜ್ಯ ವಹಿಳಾ ಮೊರ್ಚಾದ ಕಾರ್ಯದರ್ಶಿ ಜಯಲಕ್ಷ್ಮೀ ಮಹೇಶ್, ರೈತ ಮೋರ್ಚಾದ ಕಾರ್ಯರಿಣಿ ಸದಸ್ಯ ಅಣಜಿ ಗುಡದೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here