ನಮ್ಮ ದೇಶದ ಆಚಾರ-ವಿಚಾರ, ನಡೆ-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿ : ರಂಗಾಪುರ ಶ್ರೀ

0
16

ತಿಪಟೂರು :

     ಪ್ರಪಂಚದಲ್ಲಿ ಭಾರತ ದೇಶ ವಿಶೇಷವಾದ ರಾಷ್ಟ್ರ, ನಮ್ಮ ದೇಶದ ಆಚಾರ-ವಿಚಾರ, ನಡೆ-ನುಡಿ, ಸಂಸ್ಕತಿಯನ್ನು ಉಳಿಸಿ ಬೆಳೆಸಿ ಅನುಸರಿಸುವುದು ನಮ್ಮ ನಿಮ್ಮೆಲ್ಲರ ಹೊಣೆ ಮತ್ತು ಕರ್ತವ್ಯವಾಗಿದೆ ಎಂದು ಕೆರಗೋಡಿ-ರಂಗಾಪುರದ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.

      ಕಸಬಾ ಹೋಬಳಿಯ ಕೊನೇಹಳ್ಳಿಯ ಶ್ರೀ ರಂಗನಾಥ ಪ್ರೌಢಶಾಲೆಯಲ್ಲಿ 2018-19ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಪ್ರಪಂಚದಲ್ಲಿ ಭಾರತ ದೇಶ ವಿಶೇಷವಾದ ಹಾಗೂ ಸುಸಂಕ್ಕತ ದೇಶ ಪ್ರಪಂಚದ ಯಾವ ಧರ್ಮಕ್ಕೆ ಹೋಲಿಕೆ ಮಾಡಿದರೂ ಸಹ ನಮ್ಮ ಹಿಂದು ಧರ್ಮ ಯಾವ ಧರ್ಮಕ್ಕೂ ಕಡಿಮೆಯಿಲ್ಲ. ನಮ್ಮ ನುಡಿ, ನಡೆ, ಆಚಾರ, ವಿಚಾರಗಳು ಈ ಭಾರತ ದೇಶದಲ್ಲಿ ಶರಣರು, ಸಂತರು, ದಾಸರು, ಕೀರ್ತನಕಾರರು, ವಚನಗಾರರು, ಹುಟ್ಟಿ ತಪಸ್ಸು ಮಾಡಿದ್ದಂತಹ ಪುಣ್ಯ ಪುರುಷರ ನಾಡಗಿದೆ.

          ಶರಣರಿಗೆ ಪ್ರತಿಕೂಲವಾಗಿ ನಾವುಗಳು ಒಳ್ಳೆಯ ಬದುಕನ್ನು ಕಟ್ಟಿಕೊಂಡು ಸ್ವಚ್ಚವಾದ ನಡೆ ನುಡಿಗಳನ್ನು ಒಳ್ಳೆಯ ಭಾವನೆಗಳು ರೂಡಿಸಿಕೊಂಡು ಜೀವನವನ್ನು ಮಾಡಬೇಕೆಂದ ಅವರು ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿದ್ದು ಉತ್ತೀರ್ಣರಾಗಲು ಕೇವಲ 35 ಅಂಕಗಳನ್ನು ಪಡೆಯದೆ ನೂರಕ್ಕೇ ನೂರು ಅಂಕ ಪಡೆಯುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಆರ್ಶಿವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಆಡಳಿತಾಧಿಕಾರಿ ಭದ್ರಪ್ಪನವರು ಸತತ ಅಧ್ಯಯನದಿಂದ ಅಭ್ಯಾಸವನ್ನು ಮಾಡಿ ಉತ್ತಮ ಪ್ರಜೆಗಳಾಗಿ ಜೀವನವನ್ನು ಮಾಡುತ್ತಾ, ನಮ್ಮ ತಂದೆ-ತಾಯಿಯಂದಿರು ಹಿರಿಯ ವಯಸ್ಸಿಗೆ ಬಂದಾಗ ಅವರನ್ನು ದೂರ ಮಾಡದೆ ನಮ್ಮ ಜೊತೆ ಜೀವನ ಬಾಳುವಂತೆ ನೋಡಿಕೊಳ್ಳಿ ಎಂದರು

         ಬಹುಮಾನ ವಿತರಣೆ ಮಾಡಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಶಂಕರಪ್ಪ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವುಗಳನ್ನು ಪ್ರದರ್ಶಿಸುವ ಸಲುವಾಗಿ ಶಾಲೆಗಳಲ್ಲಿ ಶಾಲಾವಾರ್ಷಿಕೋತ್ಸವಗಳನ್ನು ನಡೆಸಲಾಗುತ್ತದೆ ಎಂದರು.

         ಉಪನ್ಯಾಸನ ನೀಡಿದ ಹುಣಸೇಘಟ್ಟದ ಶಿಕ್ಷಕ ದಿವಾಕರ್ ಮಾತನಾಡಿ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಸಮಾಜದಲ್ಲಿ ಯಾವ ಸಂದರ್ಭದಲ್ಲಿ ಯಾವಾಗ, ಯಾರ ಜೊತೆ, ಯಾವ ರೀತಿಯಲ್ಲಿ ವರ್ತನೆಯನ್ನು ಮಾಡಬೇಕು ವಿದ್ಯಾವಂತನಿಗೆ ವಿನಯವೇ ಭೂಷಣ ವಿನಯವಿಲ್ಲದ ಶಿಕ್ಷಣ ಅನಕ್ಷರಿಗೆ ಸಮ. ಸಮಯ ಮತ್ತು ಸಮುದ್ರದ ಅಲೆಗಳು ಯಾವಗಲೂ ಯಾರಿಗೂ ಕಾಯುವುದಿಲ್ಲ.

          ಅದನ್ನು ಅರಿತುಕೊಂಡು ನಾವುಗಳು ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನು ಮಾಡಿ ಅವುಗಳನ್ನು ಪೂರೈಸಬೇಕು ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರಾದ್ದಗಿದರೂ ಸಹ ಉತ್ತಮ ವಿದ್ಯಾಭ್ಯಾಸವ ಮಾಡುವ ಮೂಲಕ ಹಾಗೂ ದೂರದರ್ಶನ, ಮೊಬೈಲ್‍ಗಳ ದಾಸರಾಗದೆ ಹೋದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದು. ಇಡೀ ವರ್ಷ ಶಾಲೆಯಲ್ಲಿ ನಾವು ಕಲಿತ ವಿಚಾರದ ಬಗ್ಗೆ ನಾವುಗಳು ಸಿಂಹಾವಲೋಕನ ಮಾಡಿಕೊಳ್ಳುವ ಕಾರ್ಯಕ್ರಮವೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ.

           ಕಾರ್ಯಕ್ರಮದಲ್ಲಿ ಕೃಷಿಕರು ಹಾಗೂ ರಂಗ ಭೂಮಿ ಕಲಾವಿದರಾದ ಅಂಚೆಕೊಪ್ಪಲು ಶಂಕರಪ್ಪ, ಮತ್ತಿಹಳ್ಳಿ ಗ್ರಾ.ಪಂ ಸದಸ್ಯರಾದ ವನಿತಾ, ಲಕ್ಷ್ಮಿಉಮೇಶ್, ಅರುಣ್‍ಕುಮಾರ್, ಮಾಜಿ ಗ್ರಾ.ಪಂ ಅದ್ಯಕ್ಷ ಮಲ್ಲೇಶ್ ಸಿದ್ದಾಪುರ, ಮುಖ್ಯೋಪಾಧ್ಯಯ ದೇವರಾಜು, ನಿವೃತ್ತ ಶಿಕ್ಷಕರಾದ ಈಶ್ವರಪ್ಪ, ಸ್ವಾಮಿ ಸಿದ್ದಾಪುರ, ಶಂಕರಮೂರ್ತಿ, ನೀಲಕಂಠಸ್ವಾಮಿ ಹಾಗೂ ಸಂಖ್ಯೆಯಲ್ಲಿ ಪೋಷಕರು ಶಾಲೆಯ ಬೋಧಕ ಹಾಗೂ ಭೋದಕೇತರ ಸಿಬ್ಬಂದಿಯವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here