ನಸುಕಿನಲ್ಲಿ ಚಿರತೆ ದಾಳಿ

0
53

ಹರಪನಹಳ್ಳಿ:

       ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ.ಗುರಸ್ತರ ಚನ್ನವೀರಪ್ಪ ಎಂಬುವವರಿಗೆ ಸೇರಿದ ಐದಾರು ವರ್ಷದ ಆಕಳು ಇದಾಗಿದೆ. ಗ್ರಾಮದ ಮಧ್ಯದಲ್ಲಿರುವ ಕಣದಲ್ಲಿ ಕಟ್ಟಲಾಗಿದ್ದ ಆಕಳ ಮೇಲೆ ಚಿರತೆ ದಾಳಿ ನಡೆಸಿದೆ. ಆಕಳನ್ನು ಅರ್ಧಭಾಗ ತಿಂದು ಚಿರತೆ ಕಾಲ್ಕಿತ್ತಿದೆ. 15 ದಿನಗಳ ಹಿಂದೆ ಕುರಿಹಿಂಡಿನ ಮೇಲೆ ದಾಳಿ ನಡೆಸಿದ್ದ ಚಿರತೆ ಕುರಿ ಹೊತ್ತುಕೊಂಡು ತೆರಳಿತ್ತು. ಕುರಿಗಾಯಿ ರಕ್ಷಣೆ ಮಾಡಿದರಾದರೂ ಕುರಿ ಮೃತಪಟ್ಟಿತ್ತು.

       ಗ್ರಾಮದ ಕುರಿಗಾಯಿಗಳಾದ ಚೌಟ್ಗಿ ಪರಸಪ್ಪ ಮತ್ತು ಹಳ್ಳಿ ಶಿವಪ್ಪ ಅವರ ತಲಾ ಮೂರು ಕುರಿ, ಗಿರಿಯಪ್ಪರ ಜಯಪ್ಪ, ದುರಗಪ್ಪ, ಚೌಟ್ಗಿ ಸಣ್ಣ ರಾಮಪ್ಪ ಅವರ ತಲಾ ಎರಡು ಕುರಿ, ಹಡಗಲಿ ಸ್ವಾಮಿಲಿಂಗಪ್ಪ ಹಾಗೂ ಮಲ್ಲಪ್ಪನವರ ಚಿನ್ನಪ್ಪ ಅವರ ತಲಾ ಒಂದು ಕುರಿ ಸೇರಿದಂತೆ ಒಟ್ಟು 14 ಕುರಿಗಳು ಕಳೆದ ಒಂದೂವರೆ ತಿಂಗಳಲ್ಲಿ ಚಿರತೆ ದಾಳಿಗೆ ಬಲಿಯಾಗಿವೆ ಎಂದು ಕುರಿಗಾಯಿಗಳು ತಿಳಿಸಿದ್ದಾರೆ.

     `ಚಿರತೆ ಆಹಾರ ಅರಿಸಿ ಗ್ರಾಮಕ್ಕೆ ನುಗ್ಗುತ್ತಿದೆ. ಗ್ರಾಮದ ಹೊರವಲಯದಲ್ಲಿ ಕಟ್ಟುವ ದನಕರ, ಕುರಿಗಳ ಮೇಲೆ ರಾತ್ರಿ ವೇಳೆ ಚಿರತೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here