ಮರಳು ಗುತ್ತಿಗೆದಾರರ ಸಭೆಯಲ್ಲಿ ಎಂಪಿಆರ್ ಎಚ್ಚರಿಕೆ

0
13

ಹೊನ್ನಾಳಿ:

      ತಾಲ್ಲೂಕಿನ ಜನತೆಗೆ ಮನೆ ಹಾಗೂ ಮತ್ತಿತರೆ ಕಟ್ಟಡಗಳಿಗೆ ಬೇಕಾದ ಅಗತ್ಯ ಮರಳನ್ನು ಜಿಲ್ಲಾಡಳಿತ ಹಾಗೂ ಸಂಭಂಧಪಟ್ಟ ಅಧಿಕಾರಿಗಳು ವಿತರಿಸಲು ಮುಂದಾಗದಿದ್ದರೆ ಸಾರ್ವಜನಿಕರೊಂದಿಗೆ ಸೋಮವಾರದಂದು ಎತ್ತಿನಗಾಡಿ ಹಾಗೂ ಟ್ಯಾಕ್ಟರನೊಂದಿಗೆ ನೇರವಾಗಿ ನದಿಗೆ ಹೋಗಿ ಮರಳು ತುಂಬಿಸಲಾಗುವುದೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

       ಶುಕ್ರವಾರ ತಹಶಿಲ್ದಾರ ಕಛೇರಿಯಲ್ಲಿ ಕರೆಯಲಾಗಿದ್ದ ಜಿಲ್ಲಾ ಉಪವಿಭಾಗಾಧಿಕಾರಿಗಳ, ಭೂಗರ್ಭ ವಿಜ್ಞಾನ ಇಲಾಖೆಯ ಅಧಿಕಾರಿಗಳ, ತಹಶಿಲ್ದಾರ, ಪೊಲೀಸ್ ಅಧಿಕಾರಿಗಳ ಮರಳು ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು.

        ತಾವು ಶಾಸಕರಾಗಿ ಆಯ್ಕೆ ಯಾದ 6 ತಿಂಗಳಿಂದಲೂ ಮನೆ ಕಟ್ಟುವ ಶೌಚಾಲಯ ಹಾಗೂ ಆಶ್ರಯ ಮನೆಗಳ ಕಟ್ಟುವ ಸಾಮಾನ್ಯ ಜನತೆಗೆ ತಾಲ್ಲೂಕಿನಲ್ಲಿ ಪ್ರಾಕೃತಿಕ ಮರಳಿನ ಸಂಪತ್ತಿದ್ದರೂ ಕೂಡ ಮರಳು ದೊರೆಯದೆ ಅನೇಕ ದೂರುಗಳು ಕೇಳಿಬರುತ್ತಿದ್ದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು ಈ ಬಗ್ಗೆ ಜಿಲ್ಲಾಡಳಿತವು ಯಾವುದೇ ಸೂಕ್ತವಾದ ಸುಧಾರಣೆ ಕ್ರÀಮಕ್ಕೆ ಮುಂದಾಗುತ್ತಿಲ್ಲ ಎಂಬ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

          ಹುಳ್ಳಳ್ಳಿ ಮರಳು ಖ್ವಾರೆಯನ್ನು ಗುತ್ತಿಗೆದಾರ 2 ಕೋಟಿ 84 ಲಕ್ಷ ರೂಗಳಿಗೆ ಟೆಂಡರ ಹಿಡಿದಿದ್ದು ಇದನ್ನು ರದ್ದು ಮಾಡುವಂತೆ ಸೂಚಿಸಿದರು ಇಂದಿಗು ಏನು ಪ್ರಯೋಜನವಾಗಿಲ್ಲ ಇಂತಹ ಬೆಳವಣಿಗೆಯಿಂದಾಗಿ ತಾಲ್ಲೂಕಿನಲ್ಲಿ ಸಿಗುವ ಮರಳನ್ನು ಸರ್ಕಾರ ನಿಗದಿಗೊಳಿಸಿದ ದರದಕ್ಕಿಂತಲೂ ಹೆಚ್ಚಿನ ದರಕ್ಕೆ ಸಾಮಾನ್ಯ ಜನತೆ ಖರೀದಿಸಬೇಕಾದ ಶೋಚನೀಯ ಸ್ಥಿತಿ ಮುಂದುವರೆಯುತ್ತಿದೆ.
3 ಟನ್‍ನ ಮರಳನ್ನು 10 ಸಾವಿರ ರೂಗಳಿಗೆ ಮಾರಾಟಮಾಡುತ್ತಿದ್ದಾರೆ ತಾಲ್ಲೂಕಿನ ಜನತೆ ನನ್ನ ಬಗ್ಗೆ ಈ ವಿಷಯವಾಗಿ ಅಸಮದಾನದ ಮಾತುಗಳನ್ನಾಡುತ್ತಿದ್ದಾರೆ.

         ಈಗಾಗಲೇ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣಿಕೆ ನೆಪದಲ್ಲಿ ಹತ್ತು ಜನರ ಮೇಲೆ ದೂರು ದಾಖಲಿಸಿದ್ದಿರಿ. ದ್ವಿಚಕ್ರ ವಾಹನ ಹಾಗೂ ಎತ್ತಿನಗಾಡಿಗಳನ್ನು ವಶಪಡಿಸಿಕೊಳ್ಳುತ್ತಿದ್ದೀರಿ ಇಂತಹ ಅನೇಕ ಸಮಸ್ಯೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ.ಎಲ್ಲದಕ್ಕೂ ತಾವು ಪ್ರಶ್ನಿಸಿದರೆ ನಮ್ಮ ಕೈಯಲ್ಲಿಲ್ಲ ಜಿಲ್ಲಾಧಿಕಾರಿಗಳು ಸುಪ್ರಿಂ ಎಂಬ ಸಬೂಬಿನೊಂದಿಗೆ ಕಾನೂನುಗಳ ನೆಪ ಹೇಳುತ್ತೀರಿ ಜನಪ್ರತಿನಿಧಿಯಾದ ನಾವು ಸಾಮಾನ ಜನತೆಯ ಅನೇಕ ಪ್ರಶ್ನೆಗಳಿಗೆ ಉತ್ತಿರಿಸಬೇಕಾದವರು ನೀವಲ್ಲಾ ಎಂದರು.

         ತಾಲ್ಲೂಕಿನ ಗೋವಿನಕೋವಿ, ಉಳ್ಳಲ್ಲಿ, ಮಾದಾಪುರು, ಕೊನಕನಹಳ್ಳಿಗಳಲ್ಲಿ ಮರಳು ವಿತರಿಸುವ ಕೆಲಸ ಚುರುಕುಗೊಳ್ಳಬೇಕು ಸರ್ಕಾರಿ ಕಟ್ಟಡದ ಕೆಲಸಗಳಿಗೆ ಎಮ್‍ಸ್ಯಾಂಡ್ ಮರಳು ಬಸಳುವ ಅಗತ್ಯವೆನಿದೆ ಹೊನ್ನಾಳಿ ಖ್ವಾರೆಗಳಲ್ಲಿನ ಮರಳನ್ನು ಸಾರ್ವಜನಿಕರಿಗೆ ವಿತರಿಸುವ ಕಾರ್ಯ ತೊರಿತಗತಿಯಲ್ಲಿ ನಡೆಯಬೇಕೆಂದು ತಾಕೀತು ಮಾಡಿದರು.

         ಈ ಸಂಧರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ಗಂಗಲ್, ತಹಶೀಲ್ದಾರ ಮೊಹಮ್ಮದ್ ನಯೀಂ ಮೋಯಿನ್, ಇಓ ಮಲ್ಲಿಕಾರ್ಜುನ, ಭೂಗರ್ಭ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರದೀಪಿ ಸಿಪಿಐ ಮ್ಯಾಥೂ, ಎಸ್ ಐ ಕಾಡದೇವಮಠ, ಮರಳು ಗುತ್ತಿಗೆದಾರರು ಆರ್‍ಐಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here