ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೋಟ್ ಬ್ಯಾನ್ ವಿರುದ್ದ ಕರಾಳ ದಿನ ಆಚರಣೆ

ಬಳ್ಳಾರಿ:

       ಕೇಂದ್ರ ನರೇಂದ್ರ ಮೋದಿ ಸರ್ಕಾರದ ಬಹು ದೊಡ್ಡ ಸಂಚಲನ ಸೃಷ್ಟಿ ಮಾಡಿದ ನೊಟ್ ಬ್ಯಾನ್ ನವೆಂಬರ್,08 2016 ರಂದು 500, 1000, ಸಾವಿರದ ಮುಖ ಬೆಲೆ ರದ್ದು ಮಾಡಿ ಇಂದಿಗೂ ಎರಡು ವರ್ಷ ಕಳೆದು ಹೊದರು,ಮಹತ್ವದ ನಿರ್ಧಾರದಿಂದ ಯಾವುದೇ ಬದಲಾವಣೆಗಳನ್ನು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕಂಡು ಬರಲಿಲ್ಲ,ನೋಟ್ ಅಮಾನಿಕರಣ ವಿರುದ್ದ ಗ್ರಾಮೀಣ ಶಾಸಕರಾದ ಬಿ,ನಾಗೇಂದ್ರ ನೇತ್ರತ್ವದಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ದೇಶದ ಜನರಿಗೆ ಆದ ಗಾಯ ಇನ್ನೂ ಕಲೆ ಮಾಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

      ನಗರದ ಕನಕ ದುರುಗಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನೆ ಪಾದಯಾತ್ರೆ ಮೂಲಕ ರಾಯಲ್ ವೃತ್ತದಲ್ಲಿ ಟೈರ್ ಗೆ ಬೆಂಕಿಯನ್ನು ಹಚ್ಚಿ ಕೇಂದ್ರದ ಉದ್ದಟತನಕ್ಕೆ ಹರಿ ಆಯ್ದು ರದ್ದತಿ ಮಾಡಿ ಮೋದಿ ಸರ್ಕಾರ ದೊಡ್ಡ ಭ್ರಷ್ಟಾಚಾರ ವೆಸಗಿದೆ ಎಂದರು ಅಲ್ಲಿಂದ ಜಿಲ್ಲಾಧಿಕಾರಿ ಕಛೇರಿಯ ವರೆಗೆ ಪ್ರತಿಭಟನೆ ಮುಂದುವರಿದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಗೆ ಮನವಿ ಸಲ್ಲಿಸಿದರು,

     ಭಾರತದ ಆರ್ಥಿಕ ಸಾಮಾಜಿಕ ವ್ಯವಸ್ಥೆ ನೋಟು ರದ್ದತಿಯು ದುರದೃಷ್ಟಕರ ಮತ್ತು ವಿವೇಕರಹಿತ ಕ್ರಮ ಎಂದು ಬಣ್ಣಿಸಿದರು ಇಂತಹ ದುರಂತಕ್ಕೆ ದೇಶವನ್ನು ತಳ್ಳಿದ್ದರ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ಎರಡು ವರ್ಷಗಳಿಂದ ಗೊತ್ತಾಗಿಲ್ಲ, ಅಂದಹಾಗೆ ಕಪ್ಪು ಹಣ,ಭ್ರಷ್ಟಾಚಾರ, ಭಯೋತ್ಪಾದನೆ ನಿರ್ಮೂಲನೆಯಾಗಲಿದೆ ಡಿಜಿಟಲ್ ವಹಿ ಮಾತ್ರ ಇರಲಿದೆ ಎಂದಿದ್ದರು,ಜನರ ಜೀವ ಮತ್ತು ಜೀವನೋಪಾಯಗಳನ್ನು ನಿರ್ನಾಮ ಮಾಡಿದ್ದಾರೆ

      ದೇಶದಲ್ಲಿ?15.44 ಲಕ್ಷಕೋಟಿ ನೋಟ್ ರದ್ದಾದಗ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ ?15.32 ಲಕ್ಷಕೋಟಿ ನೋಟು ಅಮಾನ್ಯಿಕರಣ ಬಳಿಕ ಬ್ಯಾಂಕುಗಳಿಗೆ ಬಂದ ನೋಟುಗಳ ಮೌಲ್ಯ?10.702 ಲಕ್ಷಕೋಟಿ ಬ್ಯಾಂಕುಗಳಿಗೆ ಮರಳದೆ ಇರುವ ನೋಟುಗಳ ಮೌಲ್ಯ ಎಂದು ಅಂದಾಜಿಸಲಾಗಿದೆ, ಅದರಲ್ಲಿ ?3000 ಲಕ್ಷಕೋಟಿ ಕಪ್ಪು ಹಣ ಎಂಬುದು ಇಡಿ ದೇಶಕ್ಕೆ ಗೊತ್ತಾದ ಸಂಗತಿ ಇದು 99.2% ಬ್ಯಾಂಕುಗಳಿಗೆ ಮರಳಿದ ನೋಟುಗಳ ಪ್ರಮಾಣ ಎಂದು ಜರಿದರು ಇದಕ್ಕೆ ದೇಶದ ಜನರಿಗೆ ಮೋದಿ ಲೆಕ್ಕ ಕೊಡಬೇಕಿದೆ ಈ ನಿರ್ಧಾರದಿಂದ ಯಾರಿಗೆ ಲಾಭ? ಯಾರನ್ನು ತೃಪ್ತಿ ಪಡಿಸಲು? ಕೇಲವೆ ಜನರ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅನುಮಾನವಿದೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ ಎಸ್ ಆಂಜನೇಯಲು ಹಿರಿಯ ಮುಖಂಡ ಎಲ್ ಮಾರೆಣ್ಣ,ಜಿಲ್ಲಾ ಅದ್ಯಕ್ಷ ಮಹಮದ್ ರಫಿಕ್ ಜಿಲ್ಲಾ ಪದಾಧಿಕಾರಿಗಳು ತಾಲುಕು ಪದಾಧಿಕಾರಿಗಳು ಹಗೂ ಮಹಿಳಾ ಅದ್ಯಕ್ಷಿಣಿ ಪದ್ಮಾವತಿ ಮಹಿಳಾ ತಾಲುಕು ಪದಾಧಿಕಾರಿಗಳು ಎರಕುಲಸ್ವಾಮಿ,ವಿಷ್ಣುಕಮಲ ಮರಿಸ್ವಾಮಿ ,ಮತ್ತಿತರರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap