ರೋವರ್ ಹೊತ್ತ ಚಂದ್ರಯಾನ 2 ಗೆ ಇಸ್ರೋ ಸಿದ್ದತೆ

0
12

ಬೆಂಗಳೂರು

       ಈ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಉಡಾವಣೆಯಾಗಲಿರುವ ಲ್ಯಾಂಡರ್ ಮತ್ತು ರೋವರ್ ಹೊತ್ತ ಚಂದ್ರಯಾನ  2 ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಂತಿಮ ರೂಪ ನೀಡುತ್ತಿದೆ.

        ಕೆಲವು ಪರೀಕ್ಷಾರ್ಥ ಪ್ರಯೋಗಗಳು ಪೂರ್ಣಗೊಂಡಿಲ್ಲವಾದ್ದರಿಂದ ಉಡಾವಣೆ ಸ್ವಲ್ಪ ತಡವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪಿಎಸ್‍ಎಲ್‍ವಿ ವಾಹಕದ ಮೂಲಕ ಏಪ್ರಿಲ್ ಕೊನೆ ವಾರದಲ್ಲಿ ಚಂದ್ರನ ಮೇಲಿರಿಸುವ ಬಾಹ್ಯಾಕಾಶ ನೌಕೆ ಮತ್ತು ರೋವರ್ ಅನ್ನು ಹೊತ್ತ ಉಪಗ್ರಹದ ಉಡಾವಣೆಯಾಗಲಿದೆ.

       2017 ಮತ್ತು 2018 ರಲ್ಲಿ ಎರಡು ಬಾರಿ ಚಂದ್ರಯಾನ  2 ಮುಂದೂಲ್ಪಟ್ಟು ಈ ವರ್ಷದ ಜನವರಿಗೆ ನಿಗದಿಯಾಗಿತ್ತು. ಆದರೆ ಇದು ಏಪ್ರಿಲ್ ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.2018ರ ಉತ್ತರಾರ್ಧದಲ್ಲಿ ಇಸ್ರೋ ಅನೇಕ ಉಡಾವಣೆಗಳಲ್ಲಿ ನಿರತವಾಗಿದ್ದ ಕಾರಣ, ಈ ಚಂದ್ರಯಾನ  2 ಉಡಾವಣೆ ವಿಳಂಬವಾಗಿದೆ. ಇದು ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ವೇಳೆಗೆ ನಡೆಯಲಿದೆ ಎಂದು ಕೆ.ಸಿವನ್ ಹೇಳಿದ್ದಾರೆ.

       2019ರಲ್ಲಿ ಇಸ್ರೋ ಉದ್ದೇಶಿಸಿರುವ 32 ಉಡಾವಣೆಗಳ ಪೈಕಿ ಚಂದ್ರಯಾನ  2 ಸೇರಿದೆ. 2018ರಲ್ಲಿ ಇಸ್ರೋ ದಿಂದಾದ ಉಡಾವಣೆಗಳಿಗಿಂತ ಈ ವರ್ಷ ದುಪ್ಪಟ್ಟು ಉಡಾವಣೆಗಳಾಗಲಿವೆ ಎಂದು ಕೆ.ಸಿವನ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here