ನೂತನ ವೈದ್ಯಲೋಕದ ಬಗ್ಗೆ ತಿಳುವಳಿಕೆ ಹೆಚ್ಚಾಸಿಕೊಳ್ಳಿ : ರಾಜಕುಮಾರ ಮರೋಳ

0
47

ಹಾವೇರಿ :

         ಆಧುನಿಕ ವೈಜ್ಞಾನಿಕ ಕ್ಷಿಪ್ರಗತಿ ಬೆಳವಣೆಗೆಯ ದಿನಮಾನಗಳಲ್ಲಿ ವೈದ್ಯಲೋಕದಲ್ಲಿಯೂ ಹಲವಾರು ಸಂಶೋಧನೆ, ಆವಿಸ್ಕಾರಗಳು ಬಂದಿದ್ದು, ಇವುಗಳ ತಿಳುವಳಿಕೆಯನ್ನು ಎಲ್ಲ ವೈದ್ಯರು ಮಾಡಿಕೊಳ್ಳುವ ಅಗತ್ಯವಿದೆ ಎಂದು ಭಾರತೀಯ ಮಕ್ಕಳ ವೈದ್ಯರ ಸಂಘದ ಜಿಲ್ಲಾಧ್ಯಕ್ಷರಾದ ಡಾ|| ರಾಜಕುಮಾರ ಮರೋಳ ಹೇಳಿದರು.

          ನಗರದ ಶಿವಜ್ಯೋತಿ ಆಸ್ಪತ್ರೆಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತ್ವರಿತಗತಿಯ ನೂತನ ವೈದ್ಯಲೋಕದ ಬಗ್ಗೆ ತಿಳುವಳಿಕೆ ಹೆಚ್ಚಾಗಿಸಿಕೊಳ್ಳುವ ಉದ್ದೇಶದಿಂದ ನಗರದ ಗ್ರೀನ್ ಕೋರ್ಟ ಸಭಾಂಗಣದಲ್ಲಿ ವೈದ್ಯರಿಗಾಗಿ ಭಾರತೀಯ ವೈದ್ಯರ ಸಂಘ ಹಾಗೂ ಭಾರತೀಯ ಮಕ್ಕಳ ಸಾಂಕ್ರಾಮಿಕ ರೋಗಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ನಾಳೆ (ದಿ 09) ಬೆಳಿಗ್ಗೆ 9 ಘಂಟೆಯಿಂದ ಆಯೋಜಿಸಲಾಗಿದೆ.

            ಈ ಕಾರ್ಯಗಾರವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ|| ರಾಘವೇಂದ್ರ ಸ್ವಾಮಿಗಳು ಉದ್ಘಾಟಿಸುವರು.ಮುಖ್ಯ ಅಥಿತಿಗಳಾಗಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ||ಶಿವಾನಂದರವರು.ಕರ್ನಾಟಕ ರಾಜ್ಯದ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷರಾದ ಡಾ|| ಎನ್‍ಕೆ ಕಾಳಪ್ಪನವರ. ಮಕ್ಕಳ ಸಾಂಕ್ರಾಮಿಕ ರೋಗಗಳ ಸಂಘದ ರಾಜ್ಯಾಧ್ಯಕ್ಷರಾದ ಡಾ|| ಕಿಶೋರ ಬೈಂದೂರ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ನುರಿತ ವೈದ್ಯರು ಭಾಗವಹಿಸುವರು.

          ವೈದ್ಯರು ಎದುರಿಸುವ ವೈದ್ಯಕೀಯ ಹಾಗೂ ಜೀವನದ ಸವಾಲುಗಳನ್ನು ಹೇಗೆ ನಿರ್ವಹಿಸಬೇಕು ಎಂಬುವುದು. ಇತರ ನೂತನ ಆವಿಸ್ಕಾರಗಳ ಉಪಯೋಗಿಸುವ ವಿಧಾನ ಹಾಗೂ ವೃತ್ತಿ ಬದುಕಿನ ವಿಷಯಗಳ ಬಗ್ಗೆ ತಿಳುವಳಿಕೆಯ ಶಿಕ್ಷಣ ನೀಡಲಾಗುವುದು. ಈ ಕಾರ್ಯಾಗಾರಕ್ಕೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ವೈದ್ಯರು ಸದುಪಯೋಗ ಪಡೆದುಕೋಳ್ಳುವಂತಾಗಬೇಕು ಎಂದು ಡಾ|| ರಾಜಕುಮಾರ ಮರೋಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ|| ಮೃತ್ಯುಂಜಯ ತುರಕಾಣಿ. ಡಾ|| ವಿಲ್ಲಾಸ ಹಿರೇಗೌಡ.ಡಾ|| ಎಸ್‍ಎಲ್ ಬಾಲೇಹೊಸೂರ.ಡಾ|| ಬಸವರಾಜ ಕೊಳ್ಳಿ.ಡಾ|| ಸುದೀಪ ಪಂಡಿತ.ಡಾ|| ಶ್ರೀದೇವಿ ಕೊಳ್ಳಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here