ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ..!

      ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಈ ಮಟ್ಟದಲ್ಲಿ ನಮ್ಮ ಜೀವನವನ್ನು ಬದಲಿಸುತ್ತದೆ ಎಂದು ಸ್ವತಃ ಮೊಬೈಲ್ ತಯಾರಕರೇ ಅಂದುಕೊಂಡಿರಲಿಲ್ಲ. ಟಿಶ್ಯೂ ಕಾಗದಗಳು ಬಂದ ಬಳಿಕ ಕರ್ಚೀಫ್ ಎಂಬ ಕರವಸ್ತ್ರ ಕಾಣೆಯಾಗಿರುವಂತೆಯೇ ಮೊಬೈಲ್, ಅದರಲ್ಲೂ ಸ್ಮಾರ್ಟ್ ಫೋನ್ ಬಂದ ಬಳಿಕ ಬಹುತೇಕ ವಸ್ತುಗಳು ಕಾಣೆಯಾಗಿವೆ. ಅಲಾರಾಂ, ಕ್ಯಾಮೆರಾ, ಫೋನ್ ನಂಬ್ರದ ಪುಸ್ತಕ, ಟಾರ್ಚು, ಕ್ಯಾಲ್ಕುಲೇಟರ್ ಇತ್ಯಾದಿ. ಎಷ್ಟೋ ಜನರು ಇಂದು ಮೊಬೈಲಿನ ದಾಸರೇ ಆಗಿ ಹೋಗಿದ್ದಾರೆ.  

Related image

       ಸಧ್ಯಕ್ಕೆ ಫೋನುಗಳ ತರಂಗಾಂತರಗಳು ಅಪಾಯಕರ ಎಂಬುದನ್ನು ಯಾವುದೇ ಸಂಶೋಧನೆ ಸಾಬೀತುಪಡಿಸಿಲ್ಲ. ಆದರೆ ಕೆಲವು ಅಧ್ಯಯನಗಳ ಮೂಲಕ ಈ ಕಿರಣಗಳು ಕೊಂಚವಾದರೂ ಆಪಾಯಕರವೇ ಎಂದು ಪ್ರತಿಪಾದಿಸಿವೆ. ಸತತ ಬಳಕೆಯಿಂದ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ಪ್ರತಿ ಜೀವಕೋಶದ ಡಿಎನ್ಎ ಅಥವಾ ಜೀವತಂತುಗಳ ಮೇಲೆ ಪ್ರಭಾವ ಬೀರಬಹುದು. ಅದರಲ್ಲೂ ಗರ್ಭಿಣಿಯರಿಗೆ ಇದರ ಪರಿಣಾಮ ತೀರಾ ಹೆಚ್ಚಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಸಹಾ ವಿಕಿರಣಗಳ ಮೂಲಕ ಉಲ್ಬಣಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.   

      ಇನ್ನೂ ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಾ ಪ್ರಕಾರ ಈ ವಿಕಿರಣಗಳು ನಮ್ಮ ಶರೀರದ ವಂಶವಾಹಿನಿಯ ಮಾಹಿತಿ ಬದಲಾಗಬಹುದು. ಅಲ್ಲದೇ ಕಣ್ಣಿನ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್, ಮೆಲನೋಮಾ ಎಂಬ ಒಂದು ಬಗೆಯ ಚರ್ಮದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸಹಿತ ಇನ್ನೂ ಹಲವು ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು. ಇದರಿಂದ ತಡೆಯಬಹುದಾದ ಮಾರ್ಗಗಳನ್ನು ಅನುಸರಿಸಿ ಸಾಧ್ಯವಾದಷ್ಟು ಈ ವಿಕಿರಣಗಳಿಂದ ದೂರವಿರುವುದೇ ಸಧ್ಯಕ್ಕೆ ನಾವು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳು. 

  1. ಸಾಮಾನ್ಯವಾಗಿ ನಮಗೆ ಎಲ್ಲಾ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲ. ಯಾವ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲವೋ ಆಗ ಮೊಬೈಲನ್ನು ಏರ್ ಪ್ಲೇನ್ ಮೋಡ್ ನಲ್ಲಿರಿಸಿ. ಇದರಿಂದ ವಿಕಿರಣದ ಸಾಧ್ಯತೆ ಕಡಿಮೆಯಾಗುತ್ತದೆ.
  2.  ಸಾಧ್ಯವಾದಷ್ಟು ಹೆಚ್ಚು ಇಯರ್ ಫೋನ್ ಬಳಸಿ. ಇದರಿಂದ ಮೊಬೈಲಿನ ವಿಕಿರಣಗಳು ನೇರವಾಗಿ ಮೆದುಳಿಗೆ ತಲುಪುವುದನ್ನು ತಡೆಯಬಹುದು. ಆದರೆ ಬ್ಲೂಟೂಥ್ ಬೇಡ ಏಕೆಂದರೆ ಇದರಲ್ಲಿಯೂ ವಿಕಿರಣಗಳಿವೆ…!
  3.  ಸಿಗ್ನಲ್ ಕಡಿಮೆ ಇರುವಲ್ಲಿ ಜೀವ ಹೋಗುವಷ್ಟು ತುರ್ತಾದ ಕರೆ ಮಾಡಲೇಬೇಕಾದ ಅಗತ್ಯವಿಲ್ಲದ ವಿನಃ ಕರೆ ಮಾಡಲು ಹೋಗಬೇಡಿ.
  4.  ಮೊಬೈಲಿನಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯ ಮಾತನಾಡಿ. ಹೆಚ್ಚು ಹೊತ್ತು ಮಾತನಾಡುವುದಿದ್ದರೆ ಲ್ಯಾಂಡ್ ಲೈನ್ ಉತ್ತಮ. ಯಾವತ್ತಿಗೂ ಎದುರು ಬದುರಾಗಿ ಸ್ವತಃ ಭೇಟಿಯಾಗಿ ಕುಶಲ ಮಾತನಾಡುವುದು ಎಲ್ಲಕ್ಕಿಂತ ಉತ್ತಮ.
  5.  ಮೊಬೈಲುಗಳನ್ನು ಕೊಂಡೊಯ್ಯುವಾಗ ಶರ್ಟಿನ ಜೇಬಿನಲ್ಲಿಟ್ಟುಕೊಳ್ಳುವ ಬದಲು ಕೈಯಲ್ಲಿ ಹಿಡಿದುಕೊಂಡು ಹೋಗುವುದು ಉತ್ತಮ. ಒಟ್ಟಾರೆ ತಲೆ ಮತ್ತು ಎದೆಗಿಂತ ಮೊಬೈಲು ದೂರವಿದ್ದಷ್ಟೂ ಒಳ್ಳೆಯದು.
  6. ಎಲ್ಲೆಲ್ಲಿ ಸಂದೇಶ ಕಳಿಸಿ ಮಾಹಿತಿ ರವಾನಿಸಲು ಸಾಧ್ಯವೋ ಅಲ್ಲೆಲ್ಲಾ ಈ ವ್ಯವಸ್ಥೆ ಅನುಸರಿಸಿ. ಏಕೆಂದರೆ ಪ್ರತಿ ಕರೆಯಲ್ಲಿಯೂ ವಿಕಿರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
  7.  ಮೊಬೈಲಿಗೆ ದಾಸರಾಗಬೇಡಿ. ಮೊಬೈಲು ನಮ್ಮ ಅನುಕೂಲಕ್ಕೆ ಇದೆಯೇ ಹೊರತು ನಾವು ಅದರ ಅನುಕೂಲಕ್ಕಲ್ಲ. ಸುಮ್ಮಸುಮ್ಮನೇ ಕರೆ ಮಾಡಲು ಹೋಗಬೇಡಿ. ಅಗತ್ಯವಿದ್ದರೆ ಮಾತ್ರ ಕರೆ ಮಾಡಿ, ಚುಟುಕಾಗಿ ಹೇಳಬೇಕೆಂದಿದ್ದನ್ನು ತಿಳಿಸಿ ಇಟ್ಟುಬಿಡಿ. ಮೊಬೈಲಿನಲ್ಲಿರುವ ಸಾವಿರಾರು ಆಪ್ ಗಳನ್ನು ಪ್ರಯತ್ನಿಸಲು ಹೋಗಬೇಡಿ. ನಿಮಗೆ ನಿಜವಾಗಿಯೂ ಯಾವುದು ಅಗತ್ಯವಿದೆಯೋ ಅವನ್ನು ಮಾತ್ರ ಸಂದರ್ಭಾನುಸಾರ ಬಳಸಿ.
  8.  ರಾತ್ರಿ ಮಲಗುವ ಮುನ್ನ ಮೊಬೈಲನ್ನು ಯಾವತ್ತೂ ನಿಮ್ಮ ತಲೆಯ ಬಳಿ ಇರಿಸಬೇಡಿ. ಸಾಧ್ಯವಾದಷ್ಟು ದೂರ ಇರಿಸಿ.

ಅತಿಯಾದ ಮೊಬೈಲ್ ಫೋನ್-ಆಪತ್ತು ಕಟ್ಟಿಟ್ಟ ಬುತ್ತಿ!

      ಮೊಬೈಲ್ ವಿಕಿರಣದಿಂದ ಬರುವಂತಹ ಮೆದುಳಿನ ಕ್ಯಾನ್ಸರ್ ಮತ್ತು ಇತರ ಹಲವಾರು ರೀತಿಯ ರೋಗಗಳಿಗೆ ಮಕ್ಕಳು ತುತ್ತಾಗುತ್ತಾರೆ. ಅದರಲ್ಲಿ ರಕ್ತದ ಕ್ಯಾನ್ಸರ್ ಕೂಡ ಸೇರಿದೆ. ಆದರೆ ಇಂದು ಮೊಬೈಲ್ ಇಲ್ಲದೆ ಒಂದು ಐದು ನಿಮಿಷ ಕಳೆಯುವುದು ಕಷ್ಟವೆನ್ನುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಮೊಬೈಲ್ ಬಳಕೆ ಮಾಡುವಾಗ ಅದರ ವಿಕಿರಣದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. 

     ಮೊಬೈಲ್ ಅನ್ನು ಆದಷ್ಟು ದೇಹದಿಂದ ದೂರವಿಡಿ. ಹೆಡ್ ಸೆಟ್‌ನಿಂದ ಕರೆಯನ್ನು ಸ್ವೀಕರಿಸಿ ಅಥವಾ ಕರೆ ಮಾಡಿ. ಸಂಗೀತ ಕೇಳುವಾಗಲೂ ಹೆಡ್ ಸೆಟ್ ಬಳಸಿ. ಹೆಡ್ ಸೆಟ್‌ನ್ನು ತಲೆಯಿಂದ ಆದಷ್ಟು ಕೆಳಮಟ್ಟದಲ್ಲಿಡಿ. ಹೆಡ್ ಸೆಟ್ ಬಳಸದೆ ಇದ್ದರೆ ಕರೆ ಸ್ವೀಕರಿಸುವಾಗ ಅಥವಾ ಕರೆ ಮಾಡುವಾಗ ಮೊಬೈಲ್ ಅನ್ನು ತಲೆಯಿಂದ ದೂರವಿಡಲು ಪ್ರಯತ್ನಿಸಿ.

      ಮೊಬೈಲ್‌ನ್ನು ಯಾವತ್ತೂ ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ. ನಿಮ್ಮ ತಲೆಗೆ ಹತ್ತಿರವಾದಷ್ಟು ಅದು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದು. ಮಾತನಾಡುವಾದ ಸ್ಪೀಕರ್ ಫೋನ್ ಬಳಸಿ. ಇದರಿಂದ ಮೊಬೈಲ್ ಅನ್ನು ನಿಮ್ಮ ದೇಹದಿಂದ ದೂರವಿಡಬಹುದು. ಮನೆಯಲ್ಲಿ ಇರುವಾಗ ಆದಷ್ಟು ಲ್ಯಾಂಡ್ ಲೈನ್ ಫೋನ್ ಅನ್ನು ಬಳಸಿ. ಪೂರ್ತಿ ನೆಟ್ ವರ್ಕ್ ಇರುವಾಗಲೇ ಮೊಬೈಲ್ ಬಳಸಿ. ಕಡಿಮೆ ಇದ್ದರೆ ಅದರಿಂದ ಹೆಚ್ಚಿನ ವಿಕಿರಣ ಹೊರಸೂಸುವುದು.

ಮೊಬೈಲ್‌ನಲ್ಲಿ ತುಂಬಾ ಕಡಿಮೆ ಮಾತನಾಡಿ:

Related image

      ಕಡಿಮೆ ಮಾತನಾಡಿದಷ್ಟು ವಿಕಿರಣವು ಕಡಿಮೆ ಸೂಸುವುದು. ಇತರರಿಗೆ ನಿಮ್ಮ ಸಂದೇಶಗಳನ್ನು ತಿಳಿಸಲು ಆದಷ್ಟು ಎಸ್ ಎಂಎಸ್ ಬಳಸಿ. ಇದರಿಂದ ಮೊಬೈಲ್ ನಿಮ್ಮ ದೇಹದಿಂದ ದೂರವಿರುತ್ತದೆ ಮತ್ತು ವಿಕಿರಣಕ್ಕೆ ನಿಮ್ಮ ದೇಹವು ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ. 

ಅಂಗಿ ಅಥವಾ ಪ್ಯಾಂಟ್‌ನ ಕಿಸೆಯಲ್ಲಿ ಮೊಬೈಲ್ ಅನ್ನು ಇಡಬೇಡಿ:

Related image

      ಮೊಬೈಲ್‌ನಿಂದ ಹೊರಸೂಸುವ ವಿಕಿರಣವು ನಿಮ್ಮ ಹೃದಯ ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರಬಹುದು. ಮಕ್ಕಳನ್ನು ಆದಷ್ಟು ಮೊಬೈಲ್ ನಿಂದ ದೂರವಿಡಿ. ಯಾಕೆಂದರೆ ವಿಕಿರಣಗಳು ಬೇಗನೆ ಮಕ್ಕಳ ದೇಹದೊಳಗೆ ಪ್ರವೇಶಿಸುತ್ತದೆ.   ದೇಹದ ಯಾವುದಾದರೂ ಅಂಗದಲ್ಲಿ ಲೋಹ ಅಳವಡಿಸಿಕೊಂಡಿರುವವರು ಆದಷ್ಟು ಮೊಬೈಲ್‌ನಿಂದ ದೂರವಿರಬೇಕು. ಕೂದಲು ಒದ್ದೆಯಾಗಿರುವಾಗ ಮೊಬೈಲ್‌ನಲ್ಲಿ ಮಾತನಾಡಲು ಹೋಗಬೇಡಿ. ಯಾಕೆಂದರೆ ನೀರು ಮತ್ತು ಲೋಹವು ವಿಕಿರಣಗಳನ್ನು ಬೇಗನೆ ಸೆಳೆಯುತ್ತದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap