ದೆಹಲಿಯಲ್ಲಿ ಸ್ಮಾಗ್ ಹೆಚ್ಚಳ…!

0
15
ನವದೆಹಲಿ: 
      ದೀಪಾವಳಿ ಹಬ್ಬದ ಸಂಬ್ರಮಾಚರಣೆ ಬೆನ್ನಲ್ಲೇ  ದೆಹಲಿಯ ವಾಯು ಮಾಲಿನ್ಯ ಪ್ರಮಾಣ ಅಪಾಯದ ಅಂಚು ತಲುಪಿದೆ , ಇದರಿಂದಾಗಿ ಮುಂಜಾಗ್ರತೆ ವಹಿಸಿ  ದೆಹಲಿಗೆ ಸರಕುಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
     ದೀಪಾವಳಿ ಹಬ್ಬದ ಪ್ರಯುಕ್ತ ಎರಡು ದಿನ ನಡೆದ ಪಟಾಕಿಗಳ ಅಬ್ಬರದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲೀನ್ಯ ಹೆಚ್ಚಾಗಿದ್ದರಿಂದ ಹೊಗೆ ಮಿಶ್ರಿತ ಮಂಜು(ಸ್ಮಾಗ್) ಆವರಿಸಿದೆ ಎಂದು ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ವಾಯು ಮಾಲಿನ್ಯ  ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರ ಅನೇಕ ಸೂಚನೆಗಳನ್ನು ನೀಡಿದ್ದರೂ ಸಾರ್ವಜನಿಕರು ಇವುಗಳನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿದ ಪರಿಣಾಮ ದೆಹಲಿ ಹೊಗೆ ಮಿಶ್ರಿತ ಮಂಜಿನಲ್ಲಿ ಮುಳುಗಿದೆ. ದೆಹಲಿ ಪರಿಸ್ಥಿತಿ ಪೂರ್ತಿ ಹದಗೆಟ್ಟಿದ್ದು, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುವ ವಿಶಮ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here