ಭಾರತಕ್ಕೆ ಮಲ್ಯ ಹಸ್ತಾಂತರ: ಹಸಿರು ನಿಶಾನೆ ತೋರಿದ ಲಂಡನ್…!!

0
30

ಲಂಡನ್‌: 

          ಸಾಲ ಪಡೆದು  ದೇಶ ಬಿಟ್ಟು ಪರಾರಿಯಾಗುವ ಸಂಪ್ರದಾಯಕ್ಕೆ ನಾಂದಿ ಹಾಡಿ ಬ್ರಿಟನ್‌ನಲ್ಲಿ ಆಶ್ರಯ ಪಡೆದಿದ್ದ ಸಾಲದ ಸರದಾರ ವಿಜಯ್‌ ಮಲ್ಯ ಅರನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ವಿಜಯ್‌ ಮಲ್ಯರನ್ನು ಹಸ್ತಾಂತರ ಮಾಡಲು ಯುನೈಟೆಡ್‌ ಕಿಂಗ್‌ಡಮ್‌ನ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೆದ್‌ ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

          ಕಳೆದ ಡಿಸೆಂಬರ್‌ನಲ್ಲಿ ವೆಸ್‌ ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಜಯ್‌ ಮಲ್ಯ ಹಸ್ತಾಂತರಕ್ಕೆ ಹಸಿರು ನಿಶಾನೆ ತೋರಿಸಿತ್ತು . ಮಲ್ಯು ಹಸ್ತಾಂತರಕ್ಕೆ ಇದ್ದ ಎಲ್ಲಾ ರಾಜತಾಂತ್ರಿಕ ಅಡಚಣೆಗಳನ್ನು ತೆರವುಗೊಳಿಸಿ  ಗೃಹ ಇಲಾಖೆ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶ ಎಮ್ಮ ಆರ್ಬುಥನ್‌ನಾಟ್‌ ಆದೇಶ ನೀಡಿದ್ದಾರೆ. ವಿಜಯ್‌ ಮಲ್ಯಗೆ ಮೇಲ್ಮನವಿ ಸಲ್ಲಿಸಲು 14 ದಿನಗಳ ಅವಕಾಶ ನೀಡಲಾಗಿದೆ. ವಿಜಯ್‌ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಹಾಗೂ ಇತರೆ ವಿಷಯಗಳನ್ನು ಪರಿಶೀಲನೆ ನಡೆಸಿದ ನಂತರ ಹಸ್ತಾಂತರಕ್ಕೆ ಹಸಿರು ನಿಶಾನೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. 

          ವಿಜಯ್‌ ಮಲ್ಯ ಈಗ ಹಸ್ತಾಂತರ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದಾರೆ. ಈಗಾಗಲೇ ವಿಜಯ್‌ ಮಲ್ಯ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಬ್ಯಾಂಕ್‌ಗಳಿಂದ ಸುಮಾರು  9 ಸಾವಿರ ಕೋಟಿ ರೂ. ಸಾಲ ಪಡೆದಿದ್ದ ಮಲ್ಯ ಮರು ಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿದ್ದರು. ಬ್ರಿಟನ್‌ನಲ್ಲಿ ವಿಜಯ್‌ ಮಲ್ಯ ಆಶ್ರಯ ಪಡೆದುಕೊಂಡಿದ್ದರು ಆದರೆ ಗ್ರಹಚಾರ ಕೆಟ್ಟಾಗ ಎಲ್ಲವೂ ಕಷ್ಟ ಎಂದು ಅವರಿಗೆ ಈಗ ಅರಿವಿಗೆ ಬಂದಂತೆ ಕಾಣುತ್ತಿದೆ.ಇದರೊಂದಿಗೆ ಒಬ್ಬ ಬಹುಕೋಟಿ ವಂಚಕನ ಹಸ್ತಾಂತರಕ್ಕೆ ಅಖಾಡ ಸಿದ್ದವಾಗಿದೆ ಎಂದು ತಿಳಿದು ಬಂದಿದೆ.  

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here