ಆಡ್ವಾಣಿ @ 91….!

0
56

ದೆಹಲಿ: 

        ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಗುರು ಹಿತೈಷಿ ಹಾಗು ಬಿಜೆಪಿ ನಾಯಕ ಲಾಲಕೃಷ್ಣ ಆಡ್ವಾಣಿ ಅವರ 91ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

       ಭಾರತೀಯ ರಾಜಕಾರಣದಲ್ಲಿ ಎಲ್‌ ಕೆ ಅಡ್ವಾಣಿ ಅವರ ಪ್ರಭಾವ ಅಪಾರವಾದುದು. ಯಾವುದೇ ಸ್ವಾರ್ಥವಿಲ್ಲದೆ ಮತ್ತು ಶ್ರದ್ಧೆಯಿಂದ ಬಿಜೆಪಿ ಪಕ್ಷವನ್ನು ಕಟ್ಟುವುದರಲ್ಲಿ ಅವರ ಶ್ರಮ ಅಪಾರವಾದುದು. ಕಾರ್ಯಕರ್ತರನ್ನು ಅದ್ಭುತವಾಗಿ ಹುರಿದುಂಬಿಸಿದ ಕೀರ್ತಿ ಅವರದ್ದು. ನಮ್ಮ ಪ್ರೀತಿಯ ಆಡ್ವಾಣಿ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ದೀರ್ಘಾವಧಿಯ ಜೀವನವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

       ಆಡ್ವಾಣಿ ಅವರಿಗೆ ಪ್ರಧಾನಿ ಮೋದಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಹಾರೈಸಿದ್ದಾರೆ. ಆಡ್ವಾಣಿ 1927ರ ನ.8ರಂದು ಈಗಿನ ಪಾಕಿಸ್ಥಾನದ ಕರಾಚಿಯಲ್ಲಿ ಜನಿಸಿದ್ದರು. ಅವರು ಬಿಜೆಪಿಯ ಸಹ ಸ್ಥಾಪಕರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here