ವಾಯುಸೇನೆಗೆ ಆನೆ ಬಲ ತಂದ ಚಿನೂಕ್…!!

0
261
ಅಹ್ಮದಾಬಾದ್:
   ಇತ್ತೀಚೆಗೆ ಭಾರತದ ಸೇನಾ ಶಕ್ತಿ ಬಲಗೊಳ್ಳುತ್ತಿರುವ ಬೆನ್ನಲ್ಲೆ ಭಾರತೀಯ ವಾಯುಪಡೆಗೆ ಆನೆ ಬಲ ಬಂದಿದೆ, ಬಹು ಉಪಯೋಗಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿನೂಕ್ CH47F (I) ಹೆಲಿಕಾಪ್ಟರ್ ಗಳು ವಾಯು ಸೇನೆಗೆ ಶೀಘ್ರದಲ್ಲಿ ಸೇರ್ಪಡೆಯಾಗಲಿವೆ.
      ಬಹು ಉಪಯೋಗಿ ಹೆಲಿಕಾಪ್ಟರ್ ಆಗಿರುವಂತಹ ಚಿನೂಕ್ CH47F (I) ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿವೆ, ಪ್ರಮುಖವಾಗಿ ನೈಸರ್ಗಿಕ ವಿಪ್ಪತ್ತು ನಿರ್ವಹಣೆ , ಸೇನಾ ಪಸ್ತುಗಳ ಪೂರೈಕೆ ಇನ್ನು ಮುಂತಾದ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
 
        2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಸಂಸ್ಥೆಯೊಂದಿಗೆ ಮಹತ್ತರ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 15 ಚಿನೂಕ್ CH47F (I) ಹೆಲಿಕಾಪ್ಟರ್ ಗಳು, 22 ಅಪಾಚೆ ಹೆಲಿಕಾಪ್ಚರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಒಪ್ಪಂದದ ಅನ್ವಯ ಇದೀಗ ನಾಲ್ಕು  ಚಿನೂಕ್ CH47F (I) ಹೆಲಿಕಾಪ್ಟರ್ ಗಳು ಮತ್ತು ಅವುಗಳ ಬಿಡಿಭಾಗಗಳು ಬಂದಿಳಿದಿವೆ. ಶೀಘ್ರದಲ್ಲೇ ಚಂಡೀಘಡ ವಾಯುನೆಲೆಗೆ ರವಾನೆಯಾಗಲಿವೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here