ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ ನಿರ್ದೇಶಕ….!!!

0
326

ಚೆನ್ನೈ:

    ಕಿರುತೆರೆಯ ನಿರ್ಮಾಪಕ ಹಾಗೂ ನಿರ್ದೇಶಕನೊಬ್ಬ ತನ್ನ ಬಾಳಸಂಗಾತಿಯನ್ನು ಸಾಯಿಸಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆ ಅವಶೇಷಗಳನ್ನು ನಗರದ ವಿವಿದೆಡೆ ಕಸದ ಬುಟ್ಟಿಗಳಲ್ಲಿ ಎಸೆದಿದ್ದಾನೆ.

  ಆರೋಪಿ ನಿರ್ದೇಶಕ ಬಾಲಕೃಷ್ಣ  ತನ್ನ ಹೆಂಡತಿ ಸಂದ್ಯಾಳನ್ನು ಕೊಲೆ ಮಾಡಿ ಸುಮಾರು ಹದಿನೈದು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಇದರಿಂದ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಬಾಲಕೃಷ್ಣ ಜನವರಿ 19ರಂದು ಸಂಧ್ಯಾಳನ್ನು ಕೊಲೆ ಮಾಡಿ ಮಾರನೇ ದಿನ ಸಂದ್ಯಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ,  ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ತುಂಬಿ ಬಳಿಕ ಅದನ್ನು ಯಾರಿಗೂ ತಿಳಿಯದಂತೆ ನಗರದ ಕಸದ ಬುಟ್ಟಿಗಳಲ್ಲಿ ಎಸೆದು ಪರಾರಿಯಾಗಿದ್ದ.

    ಆದರೆ ಸಂದ್ಯಾ ತಂದೆ ತಾಯಿ ಸಂದ್ಯಾ ನಾಪತ್ತೆಯಾಗಿದ್ದಾಳೆ ಎಂದು ಕೊಟ್ಟ ದೂರಿನ ಅನ್ವಯ  ತನಿಖೆ ಮಾಡಿದ ಪೊಲೀಸರಿಗೆ ಕಸದ ಬುಟ್ಟಿಗಳಲ್ಲಿ ಮಾನವ ದೇಹದ ಅಂಗಾಗಳು ಸಿಕ್ಕಿವೆ ಅವನ್ನು ಪರಿಕ್ಷೆ ಮಾಡಿದಾಗ ಅವು ನಾಪತ್ತೆಯಾಗಿದ್ದ ಸಂದ್ಯಾಳದ್ದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಬಾಲಕೃಷ್ಣನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜ ಬಾಯಿಬಿಟ್ಟಿದ್ದಾನೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here