ಕಮಲ್ ಗೆ ಟಾರ್ಚ್ ಲೈಟ್ ಕೊಟ್ಟ ಚುನಾವಣೆ ಆಯೋಗ…!!!

ಚೆನ್ನೈ;
        ಬಹುಭಾಷಾ ನಟ  ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ(ಎಂಎನ್ಎಮ್) ಪಕ್ಷಕ್ಕೆ ಭಾರತೀಯ ಚುನಾವಣಾ ಆಯೋಗ  ಟಾರ್ಚ್ ನ ಗುರುತಿನ ಚಿಹ್ನೆ ನೀಡಿದೆ ಎಂದು ತಿಳಿದು ಬಂದಿದೆ.
        ಪಕ್ಷಕ್ಕೆ ಚುನಾವಣಾ ಆಯೋಗ ಸೂಕ್ತ ಚಿಹ್ನೆ ನೀಡಿದೆ ಎಂದು ಸ್ವತಃ ಕಮಲ್ ಹಾಸನ್ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ತಮಿಳು ನಾಡು ಮತ್ತು ಭಾರತೀಯ ರಾಜಕೀಯದಲ್ಲಿ ತಮ್ಮ ಪಕ್ಷ ಟಾರ್ಚ್ ಲೈಟ್ ನಂತೆ ಹೊಸ ಬೆಳಕನ್ನು ಹುಟ್ಟುಹಾಕಲಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.ಕಳೆದ ವರ್ಷ ಫೆಬ್ರವರಿಯಲ್ಲಿ ಕಮಲ್ ಹಾಸನ್ ಎಂಎನ್ಎಂ ಪಕ್ಷವನ್ನು ಹುಟ್ಟುಹಾಕಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ತಮಿಳು ನಾಡಿನ ಎಲ್ಲಾ 39 ಸ್ಥಾನಗಳಲ್ಲಿ ಮತ್ತು ಪುದುಚೆರಿಯ 1 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap