ಹಿಂದುತ್ವ ಶಿವಸೇನೆ-ಬಿಜೆಪಿಯನ್ನು ಬೆಸೆಯುವ ಕೊಂಡಿ : ಫಡ್ನವಿಸ್

0
25
ಮಹಾರಾಷ್ಟ್ರ
     
       ದೇಶದ ವಾಣಿಜ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮಹಾರಾಷ್ಟ್ರ ಅಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಈಗಾಗಲೇ ಗೊತ್ತಿರುವ ವಿಷಯ ಇದರ ನಡುವೆ ಈ ಸಂಬಂಧಕ್ಕೆ ತೇಪೆ ಹಾಕುವ ಕಾರ್ಯವನ್ನು ಸ್ವತಃ ಮುಖ್ಯಮಂತ್ರಿಗಳೇ ಶುರು ಮಾಡಿದಂತೆ ಕಾಣುತ್ತಿದೆ  ಹಗ್ಗ ಜಗ್ಗಾಟದ ನಡುವೆಯೂ ಮೈತ್ರಿ ಸರ್ಕಾರ ಮುಂದುವರೆಯುತ್ತಿದ್ದು,ಬಿಜೆಪಿ-ಶಿವಸೇನೆ ನಡುವಿನ ಸಂಬಂಧದ ಕೊಂಡಿಯಾಗಿರುವುದು ಹಿಂದುತ್ವ ಎಂದು ಹೇಳುವ ಮೂಲಕ ತೇಪೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
       ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್ ಬಿಜೆಪಿ-ಶಿವಸೇನೆ ನಡುವಿನ ಸಂಬಂಧ ಹಳಸಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೇ ಶಿವಸೇನೆಗೆ ಬೇರೆ ಮಾರ್ಗವೇ ಇಲ್ಲ ಎಂದು ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ. ಹಿಂದುತ್ವ ಶಿವಸೇನೆ-ಬಿಜೆಪಿಯ ಸಮಾನ ಅಂಶ ಆದ್ದರಿಂದ ಶಿವಸೇನೆ-ಬಿಜೆಪಿ ಮೈತ್ರಿಗೆ ಯಾವುದೇ ಧಕ್ಕೆ  ಇಲ್ಲ ಎಂದಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here