ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಲು ಸಿದ್ಧ : ಸಾಧ್ವಿ ಪ್ರಗ್ಯಾ ಥಾಕೂರ್‌

0
11

ಭೋಪಾಲ್‌:

     ಕೆಲ ದಿನಗಳಿಂದ ಸುದ್ದಿಯಲ್ಲಿದ್ದ ಸಾಧ್ವಿ ಪ್ರಗ್ಯಾ ಥಾಕೂರ್‌ ಅವರ ರಾಜಕೀಯ ಪ್ರವೇಶ ತೀರ್ಮಾನಕ್ಕೆ ಇಂದು ತೆರೆ ಬಿದ್ದಿದ್ದು ಇಂದು ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವನ್ನೂ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

      ಆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ಭೋಪಾಲದಲ್ಲಿ ಚುನಾವಣೆ ರಾಷ್ಟ್ರೀಯತೆಯ ವಿಚಾರದ ಮೇಲೆ ನಡೆಯಲಿದ್ದು ಮತ್ತಿದು ‘ಧರ್ಮಯುದ್ಧ’ದ ಪ್ರಾರಂಭ ಎಂದು ಹೇಳಿದ್ದಾರೆ. ಪಕ್ಷ ಅಣತಿ ಮಾಡಿದರೆ ತಾನು ಭೋಪಾಲದಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧ ಕಣಕ್ಕೆ ಇಳಿಯಲು ನಾನು ಸಿದ್ಧ ಎಂದು  ಸಹ ಪ್ರಗ್ಯಾ ಥಾಕೂರ್‌ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here