ಮೋದಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ : ಚಂದ್ರಬಾಬು ನಾಯ್ಡು

0
33
ನವದೆಹಲಿ:
   
    ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಇಂದು ನಡೆಸುತ್ತಿರುವಂತಹ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿರುವ ಬಾಬು ಅವರು ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಮೋದಿಯವರು ತಾವು ಪಾಲಿಸಬೇಕಾದ ರಾಜಧರ್ಮವನ್ನು ಯಾವತ್ತೋ ಮರೆತ್ತಿದ್ದಾರೆ ಕಿಡಿಕಾರಿದ್ದಾರೆ.
    ದೆಹಲಿಯ ಆಂಧ್ರ ಭವನದಲ್ಲಿ ಆಯೋಜಿಸಿರುವ ‘ಧರ್ಮ ಹೋರಾಟ ದೀಕ್ಷಾ’ ಸತ್ಯಾಗ್ರಹದ ಮುಂದಾಳತ್ವ ವಹಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ,ಕೇಂದ್ರ ಸರ್ಕಾರ ಆಂಧ್ರದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.   
     2014 ರಲ್ಲಿ ವಿಭಜನೆಯಾದ ಆಂಧ್ರ ಹಾಗು ತೆಲಂಗಾಣ ಪೈಕಿ ಆಂಧ್ರದಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ನಾಯ್ಡು ದೂರಿದ್ದಾರೆ. ಕಳೆದ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ವಾಗ್ದಾನ ಮಾಡಿದ್ದರು. ಆದರೆ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅವರು ತಮ್ಮ ವಿರುದ್ಧ ನಡೆದ ರಾಜ್ಯದ ವಿರುದ್ಧ ದ್ವೇಷದ ರಾಜಕೀಯದಲ್ಲಿ ಮಾಡುತ್ತಿದ್ದಾರೆ ಹಾಗು ರಾಜಧರ್ಮ ಪಾಲನೆ ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ s

LEAVE A REPLY

Please enter your comment!
Please enter your name here