ಕಾಂಗ್ರೇಸ್ ಜೊತೆ ಕೈಜೋಡಿಸಿದ ಎನ್ ಟಿ ಆರ್ ಅಳಿಯ….

ನವದೆಹಲಿ:

        ಆಂದ್ರ ಪ್ರದೇಶದಲ್ಲಿ ಬದ್ದ  ಶತ್ರುಗಳಂತೆ ಇದ್ದಂತಹ ಪಕ್ಷಗಳು ತಮ್ಮ ಚಿರ ಕಾಲದ ವೈರತ್ವವನ್ನು ಮರೆತು ಒಂದಾಗಿರುವುದು ಅಚ್ಚರಿ ಮೂಡಿಸಿದೆಯಲ್ಲದೇ ಇಷ್ಟು ದಿನ ಬಿಜೆಪಿ ಮಿತ್ರ ಪಕ್ಷವಾಗಿ ಗುರುತಿಸಿಕೊಂಡಿದ್ದಂತಹ ಟಿಡಿಪಿ ಈಗ ಬಹುಕಾಲದ ಗೆಳಯನಿಂದ ದೂರ ಸರಿದು ಗೆಳಯನ ಶತ್ರು ಪಕ್ಷದೊಂಗಿಗೆ ಸೇರುವ ಮೂಲಕ ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರು ಮಿತ್ರರಲ್ಲ ಎಂಬ ಗಾದೆಗೆ ತಾಜಾ ಉದಾಹರಣೆಯಾಗಿದೆ ತಮ್ಮ ಸರಿ ಸುಮಾರು 30 ವರ್ಷಗಗಳ ವೈರತ್ವವನ್ನು ಬದಿಗೊತ್ತುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ತೆಲಂಗಾಣ ಚುನಾವಣೆಗೆ ಜಂಟಿಯಾಗಿ ಭಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಹಾಗೂ ಚಂದ್ರಬಾಬು ನಾಯ್ಡು ಅವರು ಜಂಟಿಯಾಗಿ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. 

 

 

          ಕಾಂಗ್ರೆಸ್ ಗೆ ತಕ್ಕ ಪ್ರತಿಸ್ಪರ್ಧೆ ನೀಡಿ ಕಾಂಗ್ರೇಸ್ ಆದಿಪತ್ಯಕ್ಕೆ ಕಡಿವಾಣ ಹಾಕಲೆಂದೇ ಚಂದ್ರಬಾಬು ನಾಯ್ಡು ಅವರ ಮಾವ ಎನ್.ಟಿ.ರಾಮ ರಾವ್ ಅವರು ಈ ಪಕ್ಷ  ಸ್ಥಾಪನೆ ಮಾಡಿದ್ದರು.ಇಲ್ಲಿಯವರೆಗೂ ರಾಹುಲ್ ಹಾಗೂ ನಾಯ್ಡು ಇಬ್ಬರೂ ಬದ್ಧ ವೈರಿಗಳಂತೆಯೇ ಇದ್ದರು. ಆದರೆ, ಸಮಾರು 30 ವರ್ಷಗಳ ವೈರತ್ವವನ್ನು ಬದಿಗೊತ್ತಿರುವ ಇಬ್ಬರೂ ನಾಯಕರೂ ಇದೀಗ ಚಂದ್ರಶೇಖರ್ ರಾವ್ ಅವರನ್ನು ಸೋಲಿಸುವ ಸಲುವಾಗಿ ಕೈಜೋಡಿಸಿದ್ದಾರೆ . ಮೆ

 

 

ಹಬೂಬ್ ನಗರ ಜಿಲ್ಲೆಯ ಕೊಸ್ಗಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆಯಲಿದ್ದು, ಈ ಸಭೆಯಲ್ಲಿ ಇಬ್ಬರೂ ನಾಯಕರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ . 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap