ರಾಹುಲ್ ಗಾಂಧಿಗೆ ರಾಷ್ಟ್ರೀಯ ಮಹಿಳಾ ಆಯೋಗದ ನೊಟೀಸ್..!!!!

ನವದೆಹಲಿ:
      ಚಳಿಗಾಲದ ಅಧಿವೇಶನನದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರಿಯಾಗಿಸಿ ವ್ಯಂಗ್ಯವಾಡಿದ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೊಟೀಸ್ ಜಾರಿ  ಮಾಡಿದೆ.
       ಒಬ್ಬ ಮಹಿಳೆಯ ಹಿಂದೆ ನರೇಂದ್ರ ಮೋದಿ ಅಡಗಿ ಕುಳಿತಿದ್ದಾರೆ ಎಂದು ನಿರ್ಮಲಾ ಸೀತರಾಮನ್  ವಿರುದ್ಧ ಕಾಂಗ್ರೆಸ್ ಅಧ್ಯಕ್ಷರು ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಸ್ತ್ರೀದ್ವೇಷಿಯಾಗಿ, ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ .
     ರಫೇಲ್ ಹಗರಣಕ್ಕೆ ಸಂಬಂಧಿಇಸಿದಂತೆ ಸದನದಲ್ಲಿ ಚರ್ಚೆ ನಡೆಯುವಾಗ ಪ್ರಧಾನಿ ನರೇಂದ್ರ ಮೋದಿಯನ್ನು ರಕ್ಷಿಸಲು ಒಬ್ಬ ಮಹಿಳೆ ಸಮರ್ಥನೆ ಮಾಡಿಕೊಂಡರು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು ಎಂದು ತಿಳಿದು ಬಂದಿದೆ. 
    56 ಇಂಚಿನ ಎದೆಯ ಇರುವ ನಮ್ಮ ದೇಶದ ಪ್ರಧಾನ ಸೇವಕ ನಮಗೆ ಭಯ ಪಟ್ಟು ಓಡಿ ಹೋಗಿ, ಮಹಿಳೆಗೆ ನನ್ನನ್ನು ನಾನು ರಕ್ಷಿಸಿಕೊಳ್ಳುವುದಿಲ್ಲ,, ನೀವು ನನ್ನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದಾರೆ ಇದಕ್ಕಾಗಿ ಮಹಿಳೆ ಎರಡೂವರೆ ಗಂಟೆಗಳ ಕಾಲ ಅವರನ್ನು ಸಮರ್ಥಿಸಿ ರಕ್ಷಣೆ ಮಾಡಿಕೊಂಡರು. ನಾನು ನಿಮ್ಮನ್ನು ನೇರವಾಗಿ ಪ್ರಶ್ನಿಸುತ್ತೇನೆ, ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿ, ಆದರೆ ಈ ಮಹಿಳೆ ಉತ್ತರಿಸುವುದು ಬೇಡ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು ಎಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap