ರಾವಣನಂತೆ ಬಂದ ರೈಲು…..!!!

0
96
ಅಮೃತ್‌ಸರ್‌: 

        ದಸರಾ ಹಬ್ಬ ಎಂದರೆ ಎಲ್ಲರೂ ಸೇರಿ ಕೆಟ್ಟ ಆಲೋಚನೆಗಳಿಗೆ ಒಂದು ರೂಪ ಕೊಟ್ಟು ಅದನ್ನು ನಮ್ಮ ಮನಃ ಶಕ್ತಿಯಿಂದ ನಾಶ ಮಾಡುವ ಹಬ್ಬ. ಅಂತಹ ಹಬ್ಬ ದಿನವೇ ಭೀಕರ ರೈಲು ಅಪಘಾತ ಒಂದು ಸಂಭವಿಸಿದ್ದು ದುರಂತದಲ್ಲಿ 50ಕ್ಕೂ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

        ಅಮೃತ್‌ಸರ್‌ದಲ್ಲಿ ದಸರಾ ಪ್ರಯುಕ್ತ ರಾವಣ ಪ್ರತಿಕೃತಿ ದಹನವನ್ನು ಮಾಡಲಾಗುತ್ತಿತ್ತು. ಇದನ್ನು ಕಾಣಲು ನೂರಾರು ಮಂದಿ ಸ್ಧಳದಲ್ಲಿ ಬೀಡುತ್ತಿದ್ದರು. ಇನ್ನು ಅನೇಕರು ರೈಲಿನ ಹಳಿ ಮೇಲೆ ನಿಂತಿದ್ದು ರೈಲು ಬಂದಿದ್ದು ಗಮನಿಸಲಿಲ್ಲ. ಈ ವೇಳೆ ರೈಲು ನಿಲ್ದಾಣದಲ್ಲಿ ನೆರೆದಿದ್ದವರ ಮೇಲೆ ರೈಲು ಹರಿದಿದ್ದು ಸದ್ಯ 50 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ನೂರರ ಗಡಿ ದಾಟಬಹುದು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here