ಪಾಕ್ ಪರ ಟ್ವೀಟ್ ಮಾಡಿದ ನಟಿ..!!!!

ಮುಂಬೈ:

      ಫೆ.14ರ ದಾಳಿ ಬಳಿಕ ಪಾಕಿಸ್ತಾನ ಕಲಾವಿದರನ್ನು  ಭಾರತೀಯ ಕಲಾವಿದರ ಮಂಡಳಿ ನಿಷೇಧಿಸಿತ್ತು. ಭಾರತೀಯ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡು ಪಾಕಿಸ್ತಾನವನ್ನು ಹೊಗಳುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ ಆದಕ್ಕೆ ಹೊಸ ಸೇರ್ಪಡೆಯೆಂದರೆ ವಿಣಾ ಮಲ್ಲಿಕ್ ಅವರು ಪಾಕಿಸ್ತಾನವನ್ನು ಹಾಡಿಹೊಗಳುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

        ಭಾರತದ ವಾಯುಪಡೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಬರೆದುಕೊಂಡು ಪಾಕಿಸ್ತಾನ ಪರ ಪೋಸ್ಟ್ ಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಅನ್ನ ಬದುಕು ನೀಡಿದ ದೇಶದ ವಿರುದ್ಧವೇ ನಿಂತಿದ್ದಾಳೆ. ತಮ್ಮ ದೇಶದ ಪರ ಘೋಷಣೆಗಳನ್ನು ಬರೆದುಕೊಂಡು ಸುಮ್ಮನಾಗದೇ ಇತರೆ ಬಾಲಿವುಡ್ ತಾರೆಯರು ದೇಶದ ಯೋಧರಿಗೆ ನಮನ ಸಲ್ಲಿಸಿರುವ ಟ್ವೀಟ್ ಗಳಿಗೆ ಪ್ರತಿಕ್ರಿಯಿಸುವ ಮೂಲಕ ಕುಚೇಷ್ಟೆ ಶುರು ಮಾಡಿಕೊಂಡಿದ್ದಾರೆ .

   

   ಬದ್ಗಾಮ್‍ನಲ್ಲಿ ಪತನಗೊಂಡ ಮಿಗ್-21 ಯುದ್ಧ ವಿಮಾನದ ಫೋಟೋ ಹಾಕಿ, ಅತ್ಯುತ್ತಮ ಸೇನೆ ಜೊತೆ ವಿರೋಧ ಕಟ್ಟಿಕೊಂಡರೆ ಇದೇ ಗತಿ ಆಗುವುದು. ನಾವು ನಮ್ಮ ಮರಗಳ ನಾಶಕ್ಕೂ ಸೇಡು ತೀರಿಸಿಕೊಳ್ಳುತ್ತೇವೆ. ಮೃತ ಮರಗಳಿಗೆ ಶಾಂತಿ ಸಿಗಲಿ. ನಾವು ನಿಮಗೆ ಸರ್ಪ್ರೈಸ್ ನೀಡುತ್ತೇವೆ ಎಂದು ಬರೆದಿದ್ದಲ್ಲದೇ ನನ್ನ ದೇಶದ ಸಿಪಾಯಿಗಳಿಗೆ ದೇವರು ಇನ್ನು ಒಳಯದನ್ನು ಮಾಡಲಿ ಎಂದು ಬರೆದಿದ್ದಲ್ಲದೇ ತನ್ನ ಪಾಕ್ ಪ್ರೇಮವನ್ನು ತನ್ನ ಟ್ವಿಟರ್ ಖಾತೆಯಲ್ಲಿ ವ್ಯಕ್ತಪಡಿಸಿದ್ದಾರೆ ವೀಣಾ ಮಲ್ಲಿಕ್ .

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap