ಕೇರಳಕ್ಕೆ ಕಾಲಿಟ್ಟ ವೆಸ್ಟ್ ನೈಲ್ ಜ್ವರ : ಓರ್ವ ಬಾಲಕ ಬಲಿ

ಕೇರಳ

        ಮಲಪ್ಪುರಂ ಜಿಲ್ಲೆಯ ಏಳು ವರ್ಷದ ಹುಡುಗ ಕಳೆದ ವಾರ ವೆಸ್ಟ್ ನೈಲ್ ಜ್ವರಕ್ಕೆ ತ್ತತ್ತಾಗಿ ಇಂದು ಕೊಜಿಕ್ಕೋಡ್ ನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ .

         ವೆಂಗಾರಾ ಗ್ರಾಮದ ನಿವಾಸಿಯಾಗಿರುವ ಮುಹಮ್ಮದ್ ಶಾನ್ ಅವರಿಗೆ ಬಂದಿರುವ ವೆಸ್ಟ್ ನೈಲ್ ಜ್ವರದ ಪ್ರಕರಣದಲ್ಲಿ ಮೊದಲನೆಯದ್ದಾಗಿದೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದವರೆಗೆ ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ವೆಸ್ಟ್ ನೈಲ್ ಜ್ವರ ಪತ್ತೆಯಾಗಿರುವುದರಿಂದ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

        ಡೆಪ್ಯುಟಿ ಮೆಡಿಕಲ್ ಅಧಿಕಾರಿ ಮಲಪ್ಪುರ ಡಾ ಇಸ್ಮಾಯಿಲ್ ಹೇಳುವಂತೆ ಈ ಸಾವು ಬೆಳಿಗ್ಗೆ ಸುಮಾರು  3 ಗಂಟೆಗೆ ಆಗಿದೆ ಎಂದು ಧೃಡಪಡಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap