ಹುತಾತ್ಮ ಯೋಧರಿಗಾಗಿ 1 ಕೋಟಿ ನೀಡಲಿರುವ ಗಾನ ಕೋಗಿಲೆ …!!!

0
66

ನವದೆಹಲಿ:

        ಪುಲ್ವಾಮಾ  ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರ ಕುಟುಂಬದವರ ಕ್ಷೇಮ ಮತ್ತು ಮುಂದಿನ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸೇರಿದಂತೆ ನಟರು, ನಿರ್ಮಾಪಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈಗ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಭಾರತೀಯ ಸೈನಿಕರಿಗೆ 1 ಕೋಟಿ ರೂ. ನೀಡಲು ನಿರ್ಧರಿಸಿದ್ದಾರೆ.

         ಲತಾ ಮಂಗೇಶ್ಕರ್ ಅವರ ತಂದೆ ದಿ ಶ್ರೀ ಮಾಸ್ಟರ್ ದಿನನಾಥ್ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ದಿನದಂದು ಅಂದರೆ ಏಪ್ರಿಲ್ 24 ರಂದು ಭಾರತೀಯ ಸೈನಿಕರಿಗೆ 1 ಕೋಟಿ ರೂ. ಅನುದಾನ ನೀಡುವುದಾಗಿ  ಸ್ವತಃ ಅವರೇ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here