ಕನ್ನಡ ಟೈಪ್ ಮಾಡಲು ಕಷ್ಟಪಡಬೇಕಿಲ್ಲ.. ಈ ಆ್ಯಪ್ ಡೌನ್ ಲೋಡ್ ಮಾಡಿ!!

Image result for kannada voice notes

     ಇನ್ನುಮುಂದೆ ಕಂಪ್ಯೂಟರ್‌ ಇಲ್ಲಾ ಮೊಬೈಲ್‌ನಲ್ಲಿ ಟೈಪ್‌ ಮಾಡುವ ಕಿರಿಕಿರಿ, ಕೈ ನೋಯಿಸಿಕೊಳ್ಳುವ ತಾಪತ್ರಯವಿಲ್ಲ. ಯಾಕೆಂದರೆ  ಹೊಸ ಆವಿಷ್ಕಾರದಿಂದ ಈಗಾಗಲೇ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ.  

      ಗೂಗಲ್‌ ಪ್ಲೇ ಸ್ಟೋರ್‌ನಿಂದ ‘ಕನ್ನಡ ವಾಯ್ಸ್‌ ನೋಟ್ಸ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿ, ಮೈಕ್ರೋಫೋನ್‌ ಸಂಕೇತವನ್ನು ಒತ್ತಿದರೆ ನಿಮ್ಮ ಇಲ್ಲಾ ಅನ್ಯರ ಮಾತು ದಾಖಲಾಗುತ್ತದೆ, ನಂತರ ಅದು ಪಠ್ಯವಾಗಿ ಪರಿವರ್ತನೆಯಾಗುತ್ತದೆ. ಅಕ್ಷರ ರೂಪಕ್ಕೆ ಪರಿವರ್ತನೆಯಾದ ಪಠ್ಯವನ್ನು ವಾಟ್ಸ್ಯಾಪ್‌ ಮೂಲಕ ವಿವಿಧ ಮಾಧ್ಯಮಗಳಲ್ಲಿ ಅನ್ಯರಿಗೆ ರವಾನಿಸಬಹುದು. 

      ನೀವಾಡಿದ ಶಬ್ದ ಸರಿಯಾಗಿ ಪಠ್ಯಾಂತರವಾಗಬೇಕಿದ್ದರೆ ಸ್ಪಷ್ಟವಾಗಿ, ನಿಧಾನವಾಗಿ, ಗಟ್ಟಿಯಾಗಿ ಉಚ್ಚಾರಬದ್ಧವಾಗಿ ಮಾತನಾಡಿದರೆ ಪಠ್ಯಾಂತರ ನೀರು ಕುಡಿದಷ್ಟು ಸುಲಭ. ಇಂಗ್ಲೀಷ್‌, ಹಿಂದಿ, ಮರಾಠಿ, ಗುಜರಾತಿ, ಮಲಯಾಳ, ತೆಲುಗು, ತಮಿಳು, ಕನ್ನಡ ಹಾಗೂ ಬಾಂಗ್ಲಾ ಭಾಷಿಗರಿಗೆ ಸದ್ಯಕ್ಕೆ ವಾಯ್ಸ್‌ ನೋಟ್ಸ್‌ ಅನುಕೂಲವಿದೆ. ಪತ್ರಿಕೆಗಳಿಗೆ ಬರಹ, ಬ್ಲಾಗ್‌, ಇ ಮೇಲ್‌ ಬರಹಕ್ಕಿದು ಸೂಕ್ತ.

      ‘ಕನ್ನಡ ವಾಯ್ಸ್‌ ನೋಟ್ಸ್‌ ‘ ಆ್ಯಪ್‌ ಮೂಲಕ ನಾವಾಡಿದ ನುಡಿಯನ್ನು ಅಕ್ಷರ ರೂಪಕ್ಕಿಳಿಸುವ ಕನಸು ಈಗ ನನಸಾಗಿದೆ. ಗೂಗಲ್‌ ಕ್ರೋಮ್‌ (ವರ್ಷನ್‌ 2.5 ಅಥವಾ ಅದಕ್ಕಿಂತ ಹೆಚ್ಚು) ಬ್ರೌಸರ್‌ನಲ್ಲಿ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap