ಜಿ.ಎಸ್.ಟಿ. : ತ್ರೈಮಾಸಿಕ ರಿಟನ್ರ್ಸ್ ಸಲ್ಲಿಕೆ ಗೊಂದಲವಾಗುತ್ತಿದೆಯಾ?

      ಜಿ.ಎಸ್.ಟಿ. ಅಡಿಯಲ್ಲಿ ರಿಟನ್ರ್ಸ್ ಸಲ್ಲಿಕೆ ದಿನದಿಂದ ದಿನಕ್ಕೆ ಕ್ಲಿಷ್ಟಕರವಾಗುತ್ತಿದೆ ಎನ್ನುವ ಕೂಗು ಹಲವಾರು ಕಡೆಗಳಿಂದ ಕೇಳಿಬರುತ್ತಿದೆ. ಪ್ರತಿ ತಿಂಗಳ ವಹಿವಾಟನ್ನು ಸಲ್ಲಿಸಲು ಮೊದಲು ತ್ರಿ-ಬಿ ಫಾರಂ ಬಿಟ್ಟಿದ್ದು ತನ್ಮೂಲಕ ಇಡೀ ದೇಶದಲ್ಲಿ ಸುಮಾರು 94 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದ್ದು ನಮಗೆ ತಿಳಿದಿದೆ. ಒಟ್ಟಾರೆ ನಿಮ್ಮ ಖರೀದಿ ಮತ್ತು ಮಾರಾಟ ಕುರಿತ ಸಮ್ಮರಿ ತಿಳಿಯಲು 3ಬಿ ಫಾರಂ ಉಳಿದಂತೆ ಪ್ರತಿಯೊಂದು ವಿವರಗಳನ್ನು ಸಲ್ಲಿಸಲು ಆರ್ -1 ಎನ್ನುವುದು ಸರ್ಕಾರದ ಆಂಬೋಣ.

     ಇವೆಲ್ಲವೂ ಸರಿ. ಈಗ ಪ್ರತಿಯೊಬ್ಬ ಡೀಲರ್ ಕೋಡ್ ತನ್ನ ವಹಿವಾಟನ್ನು ಸಲ್ಲಿಸುತ್ತಾ ಕಟ್ಟಬೇಕಾದ ತೆರಿಗೆಯನ್ನು ಕಟ್ಟುತ್ತಿದ್ದಾನೆ. ಮತ್ತು ಇದರ ನಡುವೆ ಉಳಿದವರು ತಡ ಮಾಡಿದರೆ ಲೇಟ್ ಫೀಸ್ ಕಟ್ಟಿ ತಮ್ಮ ರಿಟನ್ರ್ಸ್ ಸಲ್ಲಿಸುತ್ತಿದ್ದಾರೆ. ಸಣ್ಣಪುಟ್ಟ ವರ್ತಕರು ಮತ್ತು ಕಂಪೋಸಿಷನ್ ವರ್ತಕರಿಗೆ ಮೂರು ತಿಂಗಳಿಗೊಮ್ಮೆ ರಿಟನ್ರ್ಸ್ ಸಲ್ಲಿಸಲು ಅವಕಾಶವಿದೆ. ಅದಕ್ಕಾಗಿ ಆರ್-4 ಫಾರಂ ತ್ರೈಮಾಸಿಕವಾಗಿ ಸಲ್ಲಿಸಬೇಕು. ಆದರೆ ಮೊದಲನೇ ತ್ರೈಮಾಸಿಕ ರಿಟನ್ರ್ಸ್ ಸಲ್ಲಿಸುವ ವೇಳೆಗಾಗಲೇ ವೆಬ್‍ಸೈಟ್‍ನಲ್ಲಿ ಕೊಟ್ಟ ಜಿ.ಎಸ್.ಟಿ. ಆರ್.-4 ಫಾರಂ ತುಂಬಾ ಜನ ಫೈಲ್ ಮಾಡಲು ಒದ್ದಾಡಿದ್ದು ಸಹಜ.

       ಕೆಲವೊಮ್ಮೆ ತಾಂತ್ರಿಕ ತೊಂದರೆಗಳಿಂದ ತ್ರೈಮಾಸಿಕ ರಿಟನ್ರ್ಸ್ ಸಲ್ಲಿಸಲು ತಡವಾದರೆ ಅದಕ್ಕೆ ದಂಡವನ್ನು ಕಟ್ಟುವುದು ಇನ್ನೂ ದೊಡ್ಡ ತಲೆನೋವಾಗಿತ್ತು. ಆದರೆ ಕಾರಣಗಳು ಏನೇ ಇದ್ದರೂ ಕೊನೆಯಲ್ಲಿ ದಂಡ ಬೀಳುವುದು ಮಾತ್ರ ವರ್ತಕನ ತಲೆಗೆ ಎನ್ನುವುದು ಕೂಡ ಖಾತ್ರಿ.

       ನಾವು ಯೋಚಿಸಬೇಕಾದ ವಿಷಯವೆಂದರೆ, ಕಾಂಪೋಸಿಸನ್ ವರ್ತಕರು ಸಾಮಾನ್ಯವಾಗಿ ಶೇ.1 ಮತ್ತು ಶೇ.2 ತೆರಿಗೆ ಕಟ್ಟುತ್ತಾರೆ. ಅವರಿಗೆ ತ್ರಿ-ಬಿ ಯಂತಹ ಸರಳವಾಗಿ ಮತ್ತು ಸುಲಭವಾಗಿ ವಿವರ ಸಲ್ಲಿಸುವಂತಹ ಸಂಬಂಧಿಸಿದ ತೆರಿಗೆ ಪಾವತಿಸುವ ವ್ಯವಸ್ಥೆ ಮಾಡುವುದು ಬಿಟ್ಟು ತುಂಬ ಕ್ಲಿಷ್ಟಕರವು ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ರೀತಿ ಜಿ.ಎಸ್.ಟಿ. ಆರ್-4 ಡಿಸೈನ್ ಮಾಡಿರುವುದು ಆಶ್ಚರ್ಯ. ಕಾರಣ ಕಾಂಪೋಸಿಷನ್ ಡೀಲರ್ ಯಾವುದೇ ಹೂಡುವಳಿ ತೆರಿಗೆ ಲಾಭ ಪಡೆದುಕೊಳ್ಳುವುದಿಲ್ಲವಾದ್ದರಿಂದ ನೇರವಾಗಿ ಅವನ ಮಾರಾಟ ವಹಿವಾಟಿನ ಮೇಲೆ ತೆರಿಗೆ ಸಿಂಪಲ್ಲಾಗಿ ತೆರಿಗೆ ತುಂಬುವಂತಿದ್ದರೆ ಬಹಳ ಚೆನ್ನಾಗಿತ್ತು ಎಂದು ಸಾಕಷ್ಟು ಮಂದಿ ತೆರಿಗೆ ವೃತ್ತಿಪರರು ಹೇಳುತ್ತಾರೆ.

      ಇನ್ನು ಅನುಯಲ್ ರಿಟನ್ರ್ಸ್ ಫೈಲ್ ಮಾಡಲು ಇನ್ನೆಷ್ಟು ತಲೆಕೆಡಿಸಿಕೊಳ್ಳಬೇಕೋ ಎನ್ನುವ ಆತಂಕವೂ ಅನೇಕರಿಗಿದೆ. ಒಟ್ಟಾರೆ ಇಲಾಖೆ ಬಿಡುಗಡೆ ಮಾಡುವ ಫಾರಂ ಸರಳವಾಗಿದ್ದರೆ ಗೊಂದಲಗಳಿಗೂ ಅವಕಾಶವಿಲ್ಲ ಎನ್ನುವುದನ್ನು ಸಂಬಂಧಿಸಿದವರು ಅರ್ಥಮಾಡಿಕೊಳ್ಳಬೇಕಿದೆ.

       ಟಿ.ಡಿ.ಎಸ್. ಬಗ್ಗೆ ಮಾಹಿತಿ:        ಇತ್ತೀಚೆಗೆ ಜಿ.ಎಸ್.ಟಿ. ಅಡಿಯಲ್ಲಿ ಪರಿಚಯಿಸಿದ ಟಿ.ಡಿ.ಎಸ್. ಮತ್ತು ಟಿ.ಎಸ್.ಟಿ.ಗೆ ಸಂದರ್ಶಿಸಲು ವಾಣಿಜ್ಯ ತೆರಿಗೆ ಅಪರ ಆಯುಕ್ತರಾದ ಬಿ.ವಿ.ರವಿ ಅವರನ್ನು ಮಾತನಾಡಿಸಿದಾಗ ಅವರು ಹೇಳುತ್ತಿದ್ದರು, ಇದುವರೆಗೆ ರಾಜ್ಯದಲ್ಲಿ ಸರ್ಕಾರಿ, ಅರೆಸರ್ಕಾರಿ, ಪ್ರಾಧಿಕಾರ ಇತ್ಯಾದಿಗಳಲ್ಲಿ ಸುಮಾರು 8500 ಕ್ಕಿಂತಲೂ ಹೆಚ್ಚಿನ ಮಂದಿ ನೋಂದಣಿ ಪಡೆದುಕೊಳ್ಳುವ ಅವಶ್ಯಕತೆ ಇದ್ದು, 2000ಕ್ಕೂ ಹೆಚ್ಚು ಸಂಸ್ಥೆಗಳು ಟಿ.ಡಿ.ಎಸ್. ಅಡಿಯಲ್ಲಿ ನೋಂದಣಿ ಪಡೆದುಕೊಳ್ಳಲಿಲ್ಲ.

      ಅಂತಹವರು ಶೀಘ್ರವೇ ನೋಂದಾಯಿಸಿಕೊಳ್ಳಿ ಎಂದು. ಈಗಾಗಲೇ ಈ ಕುರಿತು ಸಂಬಂಧಿಸಿದ ಡಿ.ಡಿ.ಓ.ಗಳಿಗೆ ತರಬೇತಿ ನೀಡಲಾಗಿದ್ದು, ಎಲ್ಲರೂ ಸಕಾಲದಲ್ಲಿ ಟಿ.ಡಿ.ಎಸ್. ಮಾಡಿ ಮುಂದಿನ ತಿಂಗಳ 7ನೇ ತಾರೀಖಿನ ಒಳಗೆ ಪಾವತಿಸಬೇಕು ಎಂದು ಕರೆ ಕೊಟ್ಟರು.

       ಒಟ್ಟಾರೆ ಜಿ.ಎಸ್.ಟಿ. ಎನ್ನುವುದು ವರ್ತಕರು ಅರ್ಥಮಾಡಿಕೊಳ್ಳಲು ಸದಾ ಪ್ರಯತ್ನಿಸುತ್ತಿರುವುದರಿಂದಲೇ ಈ ಕಾಂಪ್ಲೆಕ್ಸ್ ಜಾಸ್ತಿಯಾಗುತ್ತಿದೆ. ಆದರೆ ಒಂದಷ್ಟು ಸರಳೀಕರಣಗಳಂತೂ ಆಗಲೇಬೇಕು ಎನ್ನುವುದು ಹಲವರ ಅಭಿಪ್ರಾಯ. ಕಾಯಿದೆ ಸಂಪೂರ್ಣ ಅನುಷ್ಠಾನಗೊಂಡು ಯಶಸ್ವಿಯಾಗಬೇಕಾದರೆ ಖಂಡಿತ ಸರಳೀಕರಣ ಅತ್ಯವಶ್ಯ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ.

       ಇದರ ಜೊತೆಗೆ ಇತ್ತೀಚೆಗೆ ಈ ವೇ ಬಿಲ್ಲಿನಲ್ಲಿ ಆದಂತಹ ಸಣ್ಣ ಬದಲಾವಣೆಗಳಿಗೆ ಅನೇಕ ವರ್ತಕರು ಗೊಂದಲಕ್ಕೆ ಬಿದ್ದಿರುವುದು ವರದಿಯಾಗಿತ್ತು. ಕಾರಣ ಇಷ್ಟೇ. ಕೊಟ್ಟ ಒಂದೆರಡು ಸಣ್ಣ ಬದಲಾವಣೆಗಳನ್ನು ಈ ವೇ ಬಿಲ್ಲಿನಲ್ಲಿ ಮಾಡಲಾಗಿತ್ತು. ರೆಗ್ಯುಲರ್ ಆಗಿ ಲಾಗಿನ್ ಆಗಿ ಈ ವೇ ಬಿಲ್ ಜನರೇಟ್ ಮಾಡಿದವರಿಗೆ ಒಂದು ರೀತಿ ಹೊಸ ಕಾಲಂ ನೋಡಿದ ತಕ್ಷಣ ಸ್ವಲ್ಪ ಗೊಂದಲವಾಗಿದೆ. ಅದನ್ನು ಸರಿಯಾಗಿ ಓದಿಕೊಂಡು ವಿವರಗಳನ್ನು ಸಂಬಂಧಿಸಿದ ಕಾಲಂಗಳಲ್ಲಿ ತುಂಬಿದರೆ ಎಲ್ಲವೂ ಸುಗಮ. ಅದುವೇ ಈ ಸುಗಮ.

ಲೇಖಕರು: ಶ್ರೀ ಹೆಚ್ ಆರ್ ಪ್ರಭಾಕರ್ , ಬೆಂಗಳೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap