RPF  ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಾಧನೆ ಇದೀಗ ಪಠ್ಯಪುಸ್ತಕದಲ್ಲಿ..

0
6

ಮುಂಬೈ:

 ರೈಲ್ವೆ ಸುರಕ್ಷಾ ಪಡೆಯ (ಆರ್‌ಪಿಎಫ್) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಾಹಸದ ಸಾಧನೆಗಳ ಕಾರಣ ಮಹಾರಾಷ್ಟ್ರದ ಎಸ್‌ಎಸ್‌ ಎಲ್ ಸಿಪಠ್ಯಪುಸ್ತಕದ ಮೂಲಕ ಅವರ ಸಾಧನೆಯ ಯಶೋಗಾಥೆಯನ್ನು ಮಕ್ಕಳು ಅಧ್ಯಯನ ಮಾಡಲಿದ್ದಾರೆ.

32 ವರ್ಷದ ರೇಖಾ ಮಿಶ್ರಾ ಅವರು ನಿರ್ಗತಿಕ ಮತ್ತು ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಮನೆಮಾತಾಗಿದ್ದರು. ಅವರ ಸಾಹಸಗಾಥೆಯನ್ನು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿಯು 10ನೇ ತರಗತಿ ಮರಾಠಿ ಪಠ್ಯದಲ್ಲಿ ಅಳವಡಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಅವರು ನಾವು ಎಂದಿನಂತೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಮಾಡುವ ಕೆಲಸಗಳನ್ನು ಗುರುತಿಸುತ್ತಿರುವುದನ್ನು ಕಂಡು ತುಂಬಾ ಸಂತಸವಾಗಿದೆ. ಈ ಪಾಠದಿಂದ ಮಕ್ಕಳೂ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ತಿಳಿವಳಿಕೆ ಪಡೆದುಕೊಳ್ಳುತ್ತಾರೆ. ನಾವು ಇದುವರೆಗೂ 953 ಮಕ್ಕಳಿಗೆ ನೆರವಾಗಿದ್ದೇವೆ ಎಂದಿದ್ದಾರೆ.

ರೇಖಾ ಅವರು 2014ರಲ್ಲಿ ಆರ್‌ಪಿಎಫ್ ಸೇರಿಕೊಂಡಿದ್ದರು. ಪ್ರಸ್ತುತ ಅವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 

LEAVE A REPLY

Please enter your comment!
Please enter your name here