ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ!

0
74

ಬೆಂಗಳೂರು:

     ‘ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ’ ಎಂದು ಸ್ಪೀಕರ್ ರಮೇಶ್ ಕುಮಾರ್ ಇಂದಿನ ಸದನದಲ್ಲಿ ಭಾವುಕ ನುಡಿಗಳನ್ನಾಡಿದ್ದಾರೆ. 

      ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರೋ ಆಡಿಯೋದಲ್ಲಿ ಸ್ಪೀಕರ್​ ರಮೇಶ್ ಕುಮಾರ್ ಅವರ ಹೆಸರನ್ನ ಎಳೆದು ತರಲಾಗಿದೆ ಅನ್ನೋ ವಿಚಾರ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದು, ಕಲಾಪ ಆರಂಭ ಆಗುತ್ತಿದ್ದಂತೆ ಸ್ಪೀಕರ್ ರಮೇಶ್​ ಕುಮಾರ್ ಅಪರೇಷನ್ ಆಡಿಯೋದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

    ನಾನು ಶಾಸನಸಭೆಗೆ ಗೌರವಪೂರ್ವವಾಗಿ ಆಯ್ಕೆಯಾಗಿದ್ದೇನೆ. ಈವರೆಗೆ ನನ್ನ ಮೇಲೆ ಇಂಥಾ ಆಪಾದನೆ ಬರುವಂತೆ ಎಂದೂ ನಡೆದುಕೊಂಡಿಲ್ಲ. ಆದರೆ, ನನ್ನನ್ನು ದುಡ್ಡು ತೆಗೆದುಕೊಂಡಿರುವಂತೆ ಆಡಿಯೋದಲ್ಲಿ ಬಿಂಬಿಸಿರುವುದು ನನಗೆ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಆಡಿಯೋದಲ್ಲಿರುವ ಧ್ವನಿ ಯಾರದೆಂಬುದು ನನಗೆ ಗೊತ್ತಿಲ್ಲ. ಆದರೆ, ಆಡಿಯೋದಲ್ಲಿ ಮಾತನಾಡಿರುವವರು ರಮೇಶ್‍ಕುಮಾರ್ ಅವರಿಗೆ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ 50 ಕೋಟಿ ರೂ. ಹಣ ಸೇರಿಸಿದ್ದೇನೆ ಎಂದಿದ್ದಾರೆ. ತನಿಖೆ ಮೂಲಕ ಮಾತನಾಡಿರುವವರು ಯಾರು ಎಂದು ಸಾಬೀತಾದ್ರೆ. ಅವು ನನನ್ನ ಸಂಪರ್ಕಿಸಿದ್ರಾ? ನನ್ನ ಕುಟುಂಬಸ್ಥರ ಜೊತೆ ಮಾತನಾಡಿದ್ರಾ? 50 ಕೋಟಿ ಹಣ ಎಲ್ಲಿ ಕೊಟ್ಟರು? ಎಷ್ಟು ಕೊಟ್ರು. ಯಾವಾಗ ಕೊಟ್ರು? ಯಾವ ಡಿನಾಮಿನೇಷನ್​ನಲ್ಲಿ ಕೊಟ್ರು ಎಂದು ಪ್ರಶ್ನಿಸಿದರು.

     ನಾನು  ಬೆಂಗಳೂರಿನಲ್ಲಿ  ಸರ್ಕಾರಿ ಬಂಗಲೆ ತಗೆದುಕೊಳ್ಳದೇ, ದೊಮ್ಮಲೂರಿನ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಬೋರ್ಡ್ ಕೂಡ ಹಾಕಿಲ್ಲ. ಅಂತಹದರಲ್ಲಿ ಇಷ್ಟು ದೊಡ್ಡ ಆರೋಪ ನನ್ನ ಮೇಲೆ ಮಾಡಲಾಗಿದೆ. ಅಷ್ಟು ಪ್ರಮಾಣದ ಹಣವನ್ನು ನಾನೆಲ್ಲಿ ಇಟ್ಟುಕೊಳ್ಳಲಿ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here