ದಾಹ

0
40
 
 ಹೆಚ್ಚುತಿದೆ ಮೋಹ
ಎಂದಿಗೂ ತೀರದ ದಾಹ
ತಿಂದಷ್ಟೂ ಹಸಿವು
ಕುಡಿದಷ್ಟೂ ಬಾಯಾರಿಕೆ.
ನಡೆಯುತಲಿರೆ ದಾರಿ ಸಾಗುತಲಿದೆ ಹಾದಿ
ನೋಡಿದಷ್ಟೂ ಮುಗಿಲು ಸಿಗದಷ್ಟು ದೂರ
ಏರಿದಷ್ಟೂ ಪರ್ವತ ಬೆಳೆಯುತಲಿದೆ ಎತ್ತರ
ಎಣಿಸಿದಷ್ಟೂ ಚುಕ್ಕಿ ಹೆಚ್ಚುತಲಿವೆ ಉಕ್ಕಿ.
ಹೆಚ್ಚುತಿದೆ ಮೋಹ ಅದುವೇ ಜ್ಞಾನದ ದಾಹ
ಜ್ಞಾನ ಸಾಗರದ ತಟದಲಿ ನಿಂತು
 ನನ್ನ ಕಿರು ಬೆರಳಿನ ತುದಿಯನಷ್ಟೇ ನೆನೆಸಿರುವೆ
ಸಾಗರದಲಿ ಇಳಿದು ಈಜಿದವರ ಮಾರ್ಗದರ್ಶನಕೆ ಕಾದಿರುವೆ.
-ಹೇರುಶಿ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here