#ಮೀಟೂ 150ಕ್ಕೂ ಹೆಚ್ಚು ದೂರು ದಾಖಲು

0
11
ಬೆಂಗಳೂರು
 
      ಮೀಟೂ ಅಭಿಯಾನದ ಬಳಿಕ ರಾಜ್ಯ ಮಹಿಳಾ ಆಯೋಗದಲ್ಲಿ 150 ಕ್ಕೂ ಹೆಚ್ಚು ಮಂದಿ ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ಗಳು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ.
      ಲೈಂಗಿಕ ಕಿರುಕುಳ, ದೌರ್ಜನ್ಯ ಕಿರುಕುಳ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುತ್ತಿರುವ ದೂರುಗಳ ಸಂಖ್ಯೆ  ದಿನೇ ದಿನೇ ಹೆಚ್ಚಾಗುತ್ತಿದ್ದು ಅದರಲ್ಲೂ ನಗರದ  ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ಗಳ ಸಂಖ್ಯೆಯೇ ಹೆಚ್ಚಾಗಿದೆ. ಸಾಲುಗಟ್ಟಿ ಆಯೋಗಕ್ಕೆ ಬರುವ ಮಹಿಳೆಯರು ತಮಗಾದ ಸಮಸ್ಯೆಯನ್ನ ಮಹಿಳಾ ಆಯೋಗದ ತೋಡಿಕೊಳ್ಳ ತೊಡಗಿದ್ದಾರೆ. ರಾತ್ರಿ 9 ಗಂಟೆಯವರೆಗೆ ಸರತಿಯಲ್ಲಿ ನಿಂತು ಮಹಿಳೆಯರು ದೂರು ನೀಡುತ್ತಿದ್ದಾರೆ.
       ಮಹಿಳೆಯರ ದೂರುಗಳಿಗೆ ಪರಿಹಾರ ಒದಗಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅದಷ್ಟು ಶೀಘ್ರ ದೂರುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.
4800 ಪ್ರಕರಣ
        ಕಳೆದ ಎರಡು ವರ್ಷದಲ್ಲಿ ಮಹಿಳಾ ಆಯೋಗದಲ್ಲಿ 4800 ಪ್ರಕರಣ ದಾಖಲಾಗಿದೆ. ಅದರಲ್ಲಿ ಕೌಟುಂಬಿಕ ದೌರ್ಜನ್ಯ 1045, ರಕ್ಷಣೆ 1113, ವರದಕ್ಷಿಣೆ ಕಿರುಕುಳ 185 , ವರದಕ್ಷಿಣೆ ಸಾವು 25,ಅತ್ಯಾಚಾರ 8 , ಅತ್ಯಾಚಾರದಿಂದ ಸಾವು 1, ಲೈಂಗಿಕ ಕಿರುಕುಳ 26, ಕೆಲಸದ ಸ್ಥಳದಲ್ಲಿ ಮೀಟು ಪ್ರಕರಣ ..182, ಪ್ರೇಮ ಪ್ರಕರಣ 32, ಜೀವನಾಂಶ 2, ಆಸ್ತಿ ವಿವಾದ 210, ಪೆÇಲೀಸರ ನಿರ್ಲಕ್ಷ್ಯ 82 ಪ್ರಕರಣ ದಾಖಲಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here