ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 80 ಕೋಟಿ ಅನುದಾನ : ಡಿ. ರಾಘವೇಂದ್ರ

ಬೆಂಗಳೂರು

        ರಾಜ್ಯದಲ್ಲಿ ಕಳೆದ ಜನಗಣತಿಯನ್ವಯ 43 ಲಕ್ಷ ಪರಿಶಿಷ್ಟ ಪಂಗಡದವರಿದ್ದು ಪಂಗಡದ ಅಭಿವೃದ್ಧಿಗಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಮಾತ್ರ ಅಭವೃದ್ಧಿ ನಿಗಮ ಕಾರ್ಯ ನಿರ್ವಹಿಸುತ್ತಿದೆ. 7 ಜಿಲ್ಲೆಗಳಲ್ಲಿ ನಿಗಮದ ಕಛೇರಿಗಳೇ ಇಲ್ಲ. ಜಿಲ್ಲಾಡಳಿತ ಕಟ್ಟಡದಲ್ಲಿಯೇ ಅಭಿವೃದ್ಧಿ ನಿಗಮ ಕಛೇರಿ ಆರಂಭಿಸಲು ಸರ್ಕಾರ ಆದೇಶಿಸಿದೆ ಎಂದು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ. ರಾಘವೇಂದ್ರ ತಿಳಿಸಿದ್ದಾರೆ.

       ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಈ ಬಾರಿ ಬಜೆಟ್‍ನಲ್ಲಿ 80 ಕೋಟಿ ಅನುದಾನ ನೀಡಲಾಗಿದೆ. ಉಳಿದಂತೆ ಐರಾವತ, ಸಂವೃದ್ಧಿ, ಉನ್ನತಿ ಯೋಜನೆ ಜಾರಿಗೊಳಿಸಲಾಗಿದೆ. ನಿಗಮಕ್ಕೆ ಸರ್ಕಾರದಿಂದ 1600 ಕೋಟಿ ಅನುದಾನ ದೊರೆತಿದೆ ಎಂದರು.

        ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಏರಿಕೆ ಹಾಗೂ ಮುಂಬಡ್ತಿ ವಿಳಂಬ ಕುರಿತಂತೆ ಗಾಂಧೀ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪರಿಶಿಷ್ಟರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವ್ಯಾಪಾರ ಆರಂಭಕ್ಕಾಗಿ ಡೀಲರ್ ಶಿಪ್ ಒದಗಿಸಲು 87 ಪ್ರತಿಷ್ಟಿತ ಕಂಪನಿಯೊಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

         ಐರಾವತ ಯೋಜನೆಯಡಿ ವೋಲಾ, ಹೂಬರ್ ಟ್ಯಾಕ್ಸಿ ಕಂಪನಿಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾಲ್ಮೀಕಿ ಮ್ಯೂಸಿಯಂ ನಿರ್ಮಾಣಕ್ಕೆ ಚಿಕ್ಕಜಾಲ ಹೊಸಳ್ಳಿ ಬಳಿ ಜಮೀನು ಗುರುತಿಸಲಾಗಿದೆ.ಇದೇ ಡಿಸೆಂಬರ್‍ನಲ್ಲಿ ಶಿಲಾನ್ಯಾಸ ನೆರವೇರಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚೆ ಮುಂದುವರಿಸಲಾಗಿದೆ. ಎಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಹಾಯಕ ಪೆÇಲೀಸ್ ಆಯುಕ್ತ ಎಂ.ಜಿ. ಪಂಪಾಪತಿ ನ್ಯಾಯಾಲಯಗಳಲ್ಲಿ ಮೀಸಲಾತಿ ಪರವಾಗಿ ನೀಡುತ್ತಿರುವ ತೀರ್ಪುಗಳ ಅನುಷ್ಟಾನ ವಿಳಂಬವೇ ಪರಿಶಿಷ್ಟರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವಲ್ಲಿ ಆಗುತ್ತಿರುವ ಪ್ರಮುಖ ಅಡಚಣೆ ಎಂದರು.

         ಮೀಸಲಾತಿಗೆ ವಿರೋಧವಾಗಿ ನ್ಯಾಯಾಲಯಗಳಲ್ಲಿ ನೀಡುತ್ತಿರುವ ತೀರ್ಪುಗಳು ಶೀಘ್ರ ಅನುಷ್ಟಾನಗೊಳ್ಳುತ್ತಿವೆ. ಆದರೆ ಈ ಹಿಂದೆ ಮೀಸಲಾತಿ ಪರವಾಗಿ ನೀಡಿರುವ ಸಾಕಷ್ಟು ಆದೇಶಗಳು ಅನುಷ್ಟಾನವೇ ಆಗಿಲ್ಲ. ಡಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪು ಅನುಷ್ಟಾನಕ್ಕೆ ದೊರೆತಂತಹ ಬೆಂಬಲ ಮೀಸಲಾತಿ ಪರವಾದ ತೀರ್ಪು ಅನುಷ್ಟಾನಕ್ಕೆ ದೊರೆಯಲಿಲ್ಲ ಎಂದು ತಿಳಿಸಿದರು.

ಅತಿದೊಡ್ಡ ಅನ್ಯಾಯ

        ಮಾಧುರಿ ದೀಕ್ಷಿತ್ ಪ್ರಕರಣದಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವೈದ್ಯಕೀಯ ಸೀಟು ಪಡೆದು ಶಿಕ್ಷಣ ಪೂರೈಸಿದ ವಿದ್ಯಾರ್ಥಿಗೆ ನ್ಯಾಯಾಲಯ ಮಾನವೀಯತೆ ಆಧರಿಸಿ ಶಿಕ್ಷಣ ಪೂರ್ಣಗೊಂಡಿರುವ ಹಿನ್ನೆಲೆ ಅವರ ವೈದ್ಯಕೀಯ ಪದವಿಯನ್ನು ಅಧಿಕೃತಗೊಳಿಸಿ ತೀರ್ಪು ನೀಡಲಾಯಿತು. ಆದರೆ ಸಾವಿರಾರು ಸಂಖ್ಯೆಯಲ್ಲಿ ಪಡೆದಿದ್ದ ಪರಿಶಿಷ್ಟ ಜಾತಿಯ ನಕಲಿ ಪ್ರಮಾಣಪತ್ರವನ್ನು ಈ ತೀರ್ಪನ್ನು ಆಧರಿಸಿ ಅಧಿಕೃತಗೊಳಿಸಲಾಯಿತು. ಇದು ನಿಜವಾಗಿ ಸೌಲಭ್ಯ ಪಡೆಯಬೇಕಾದ ಪರಿಶಿಷ್ಟ ಪಂಗಡಕ್ಕೆ ಆದ ಅತಿದೊಡ್ಡ ಅನ್ಯಾಯ ಎಂದರು.

       ಅಶೋಕ್ ಕುರಿಯನ್ ಮಾತನಾಡಿ, ಪರಿಶಿಷ್ಟ ಪಂಗಡ ಅಂದಾಜು 50 ಜಾತಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ವಾಲ್ಮೀಕಿ ಜನಾಂಗ ಹೆಚ್ಚು ಸಂಖ್ಯೆಯಲ್ಲಿದೆ. ಈ ಹಿಂದೆಸಂಸದರು, ಶಾಸಕರು, ಸಹಾಯಕ ಶಿಕ್ಷಣ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ವಿತರಿಸುವ ಅಧಿಕಾರ ನೀಡಿರುವುದೇ ನಕಲಿ ಜಾತಿ ಪ್ರಮಾಣ ಪತ್ರಗಳು ಹೆಚ್ಚಳವಾಗಿವೆ. ಶಿಫಾರಸ್ಸು, ಒತ್ತಡ ಹಾಗೂ ಇನ್ನಿತರ ಸಂದರ್ಭಗಳಿಗೆ ಸಿಲುಕಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳ ಸೌಲಭ್ಯ ಪಡೆದುಕೊಳ್ಳುವ ಉದ್ದೇಶದಿಂದ ನಕಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸಿರುವುದು ನಿಜವಾದ ಪರಿಶಿಷ್ಟರಿಗೆ ವಂಚನೆಯಾಗಲು ಮೂಲ ಕಾರಣ ಎಂದರು.

         ಅದಾದ ನಂತರ ತಹಶೀಲ್ದಾರ್ ಅವರಿಗೆ ಜಾತಿ ಪ್ರಮಾಣಪತ್ರ ನೀಡುವ ಪರಮಾಧಿಕಾರ ನೀಡಲಾಗಿದೆ. ಆದರೆ ನಿಯಮಾನುಸಾರ ತಹಶೀಲ್ದಾರ್ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರ ಸ್ಥಳ ಪರಿಶೀಲನೆ ಆಚಾರ-ವಿಚಾರ ಎಲ್ಲ ಮಾಹಿತಿ ಸಂಗ್ರಹಿಸಿ ನೀಡಿದಾಗ ಮಾತ್ರ ನಕಲಿ ಪ್ರಮಾಣ ಪತ್ರಗಳನ್ನು ತಡೆಯಲು ಸಾಧ್ಯ ಎಂದರು.

         ವೇದಿಕೆಯಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ಬುಡಕಟ್ಟು ಸಂಶೋಧನಾ ಕೇಂದ್ರದ ನಿರ್ದೇಶಕ ಜಿ.ಟಿ. ಬಸವನಗೌಡ, ಜಲಮಂಡಳಿ ಮುಖ್ಯ ಅಭಿಯಂತರ ಕೆಂಪರಾಮಯ್ಯ, ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap