ಸಮರಕಲಿ ಕುಲ್‌ದೀಪ್‌ ಸಿಂಗ್‌ ವಿಧಿವಶ!

ಚಂಡೀಗಡ: 

Image result for brigadier kuldeep singh

      ಸ್ವತಂತ್ರ ಭಾರತ ಕಂಡ ಅಪ್ರತಿಮ ಯೋಧರಲ್ಲಿ ಒಬ್ಬರಾದ ಬ್ರಿಗೇಡಿಯರ್‌ ಕುಲ್‌ದೀಪ್‌ ಸಿಂಗ್‌ ಚಂದ್‌ಪುರಿ ಇಂದು ನಮ್ಮನ್ನು ಅಗಲಿದ್ದಾರೆ. 

      ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಾಂದ್‌ಪುರಿ, ಚಂಡೀಗಡದ ಆಸ್ಪತ್ರೆಯೊಂದರಲ್ಲಿ ಇಂದು ನಿಧನರಾಗಿದ್ದು, ಮಡದಿ ಹಾಗು ಮೂವರು ಪುತ್ರರನ್ನು ಅವರು ಅಗಲಿದ್ದಾರೆ.

      ಪಂಜಾಬ್‌ ರೆಜಿಮೆಂಟ್‌ನ 23ನೇ ಬಟಾಲಿಯನ್‌ನಲ್ಲಿ ಕಮಿಷನ್ಡ್‌ ಆಗಿದ್ದ ಸಿಂಗ್‌, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಮಿಶನ್‌ನಲ್ಲೂ ಭಾಗವಹಿಸಿ ದೇಶದ ಮಿಲಿಟರಿ ಪರಂಪರೆಯನ್ನು ಸಾಗರೋತ್ತರ ಮಟ್ಟದಲ್ಲೂ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

      1971ರ ಭಾರತ-ಪಾಕಿಸ್ತಾನ ಯುದ್ಧದ ಲೋಂಗೇವಾಲಾ ಕದನದಲ್ಲಿ, ಜೈಸಲ್ಮೇರ್‌ಅನ್ನು ವಶಪಡಿಸಿಕೊಳ್ಳಬೇಕೆಂದು ಥಾರ್‌ ಮರುಭೂಮಿಗುಂಟ ಭಾರತದ ಭೂಪ್ರದೇಶದತ್ತ ಧಾವಿಸಿದ್ದ ಪಾಕಿಸ್ತಾನ ಸೈನ್ಯದ ದೊಡ್ಡ ಪದಾತಿ ದಳವನ್ನೇ  ಹಿಮ್ಮೆಟ್ಟುವಲ್ಲಿ ಕುಲ್‌ದೀಪ್‌ ಸಿಂಗ್‌ ಮಹತ್ತರ ಪಾತ್ರ ನಿರ್ವಹಿಸಿದ್ದರು. ಸಿಂಗ್‌ರ ಪರಾಕ್ರಮಕ್ಕೆ ಅರ್ಹವಾಗಿಯೇ ಮಹಾ ವೀರ ಚಕ್ರ ಗೌರವ ಅರಸಿ ಬಂದಿತ್ತು. ಕೇವಲ 120 ಮಂದಿಯನ್ನು ತಮ್ಮ ಕೈ ಕೆಳಗೆ ಹೊಂದಿದ್ದ ಸಿಂಗ್‌ರ ಪರಾಕ್ರಮವನ್ನು ಬಾಲಿವುಡ್‌ನ ಹಿಂದಿ ಚಲನಚಿತ್ರ “ಬಾರ್ಡರ್‌”ನಲ್ಲಿ ಬಿತ್ತರಿಸಲಾಗಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap