ಚಿಟ್ ಫಂಡ್ ವಂಚಕನ ಬಂಧನ

ಬೆಂಗಳೂರು

       ಹೆಚ್ಚಿನ ಬಡ್ಡಿ ಆಸೆ ತೋರಿಸಿ ಚಿಟ್ ಫಂಡ್ ಫೈನಾನ್ಸ್ ಮೂಲಕ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಕೋಲಾರದ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

       ಕೋಲಾರದ ಆರ್ ಕೆಎನ್ ರೈಸ್ ಮಿಲ್ ಮಾಲೀಕ ಷಣ್ಮುಗಂ ಮತ್ತವರ ಪುತ್ರ ದಿಲೀಪ್, ಫೈನಾನ್ಸ್ ಮ್ಯಾನೇಜರ್ ನಾಗರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ವಂಚನೆಗೆ ಒಳಗಾಗಿದ್ದ ಸತ್ಯನಾರಾಯಣ ಎಂಬವರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಿ ದಾಖಲೆ ಪತ್ರಗಳನ್ನು ವಶಪಡಿಸಲಾಗಿದ

       ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ನವೆಂಬರ್ 13ರವೆರಗೆ ನಗರದ 61ನೇ ಎಸಿಎಂಎಂ ನ್ಯಾಯಾಲಯ ಪೆÇಲೀಸ್ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾರಪೇಯಲ್ಲಿ ಆರ್.ಕೆ.ಎನ್ ಚಿಟ್ಸ್ ಅಂಡ್ ಇನ್ವೆಸ್ಟ್ ಮೆಂಟ್ ಹೆಸರಿನಲ್ಲಿ ಷಣ್ಮುಗಂ ಲೇವಾದೇವಿ ವ್ಯವಹಾರ ಆರಂಭಿಸಿದ್ದನು.

         ಸುಮಾರು ಇಪ್ಪತ್ತು ವರ್ಷಗಳಿಂದ ಕಂಪನಿ ವ್ಯವಹಾರ ನೋಡಿದ್ದ ರೈತರು, ರಾಜಕಾರಣಿಗಳು, ವ್ಯಾಪಾರಸ್ಥರು, ನಿವೃತ್ತ ಹಾಗೂ ವೃತ್ತಿನಿರತ ಅಧಿಕಾರಿಗಳು ತೆರಿಗೆ ವಂಚನೆಗಾಗಿ ಹಾಗೂ ಬಡ್ಡಿಯಾಸೆಗೆ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು.

         ಸುಮಾರು 6 ಸಾವಿರ ಕೋಟಿ ರೂ. ಠೇವಣಿ ಪಡೆದು ಯಾವುದೇ ಲೆಕ್ಕ ತೋರಿಸದೆ ಇತರರಿಗೆ ಸಾಲ, ಎಲ್‍ಐಸಿ ಬಾಂಡ್, ಜಮೀನು ಖರೀದಿ, ಹಣ ಲೇವಾದೇವಿ ವ್ಯವಹಾರಗಳಲ್ಲಿ ಕಂಪನಿ ತೊಡಗಿಸಿಕೊಂಡಿತ್ತು. ಕೇಂದ್ರ ಸರ್ಕಾರವು ನವೆಂಬರ್ 2016ರಲ್ಲಿ ನೋಟ್ ಬ್ಯಾನ್ ಮಾಡಿದಾಗ, ಹಣ ವರ್ಗಾವಣೆ ಹಾಗೂ ಬಡ್ಡಿ ಪಾವತಿಸಲು ಕಷ್ಟ ಎದುರಿಸಿದ್ದರು. ಇದರಿಂದಾಗಿ ಕಂಪನಿಯ ನಿಜವಾದ ವಂಚನೆ ಬಯಲಿಗೆ ಬಂದಿತ್ತು. ಅಷ್ಟೇ ಅಲ್ಲದೆ ಗ್ರಾಹಕರ ನಂಬಿಕೆ ಗಿಟ್ಟಿಸಿಕೊಳ್ಳಲು ಚೆಕ್‍ಗಳನ್ನು ನೀಡಿದ್ದ. ಆದರೆ ಅವುಗಳಲ್ಲಿ 20ಕ್ಕೂ ಹೆಚ್ಚು ಗ್ರಾಹಕರ ಚೆಕ್ ಬೌನ್ಸ್ ಆಗಿವೆ.

        ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ತಮ್ಮ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬ ಭಯ ಹಲವರಲ್ಲಿ ಉಂಟಾಗಿದೆ. ಹೀಗಾಗಿ ಅವರು ಏನನ್ನು ಹೇಳಿಕೊಳ್ಳದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap