ಅದೃಷ್ಟದ ಕಾರು ಬದಲಿಸಿದ ಸಿಎಂ!

0
67

ಬೆಂಗಳೂರು:

      ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ಕಾರು ಬದಲಾಯಿಸಿದ್ದು, ಹೊಸ ಕಾರಿನಲ್ಲಿ ತಮ್ಮ ಪ್ರಯಾಣವನ್ನು ಮಾಡುತ್ತಿದ್ದಾರೆ.

     ಹೌದು. ಇತ್ತೀಚೆಗೆ ಶ್ರೀರಂಗಪಟ್ಟಣದ ಪೀಹಳ್ಳಿ ಸಮೀಪ ಸಿಎಂ ಅವರ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರನ್ನು ದುರಸ್ಥಿಗೆ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಳೆದ ಮೂರು ದಿನಗಳಿಂದ ಹೊಸ ಕಾರಿನಲ್ಲೇ ಓಡಾಟ ನಡೆಸುತ್ತಿದ್ದಾರೆ.

     ಸಿಎಂ ಅವರು 8 ತಿಂಗಳ ಹಿಂದೆ ಎಂಎಲ್‍ಸಿ ಫಾರೂಕ್ ಖರೀದಿಸಿರುವ ಲೆಕ್ಸಸ್ ಕಾರಿನಲ್ಲಿ ಸದ್ಯ ಪ್ರಯಾಣ ಮಾಡುತ್ತಿದ್ದಾರೆ.  ಜಪಾನ್ ನಿಂದ ಇಂಡಿಯಾಕ್ಕೆ ಬಂದ ಮೊದಲ ಕಾರು ಇದಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here