ಪಟಾಕಿ ಹೊಡೆಯಿರಿ..ಆದರೆ ಈ 2 ಗಂಟೆ ಮಾತ್ರ!!

0
97

ಬೆಂಗಳೂರು:

        ಕರ್ನಾಟಕದಲ್ಲಿ ಪಟಾಕಿ ಸಿಡಿಸಲು ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ನಿಗಧಿಪಡಿಸಿದ ಸಮಯ ಬಿಟ್ಟು ಬೇರೆ ಸಮಯದಲ್ಲಿ ಪಟಾಕಿ ಹೊಡೆದರೆ, ಕಾನೂನು ಉಲ್ಲಂಘನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 

      ಸುಪ್ರೀಂಕೋರ್ಟ್ ತೀರ್ಪಿನಂತೆ ಹಸಿರು ಪಟಾಕಿ ಹೊಡೆಯಲು ಇನ್ನು ಮಾರುಕಟ್ಟೆಯಲ್ಲಿ ಅದು ಲಭ್ಯವಿಲ್ಲ. ಇನ್ನು ರಾಜ್ಯದಲ್ಲೂ ಕೂಡ ಪಟಾಕಿ ಸಿಡಿಸಲು ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಇದು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯವೇ ರಚಿಸಲಾಗಿದೆ.

     ನವೆಂಬರ್ 5ರಿಂದ 8ರವರೆಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ ದೀಪಾವಳಿ ಹಬ್ಬದಂದು ಮನಸೋ ಇಚ್ಛೆಯಾಗಿ ರಾತ್ರಿ-ಹಗಲು ಎನ್ನದೆ ಪಟಾಕಿ ಸಿಡಿಸಬೇಕೆಂದುಕೊಂಡವರಿಗೆ ಈ ವರ್ಷ ನಿರಾಸೆಯಾಗಲಿದೆ.  

      ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದ್ದು, ಅಧಿಕೃತ ಪರವಾನಿಗೆ ಪಡೆದವರು ಮಾತ್ರ ಪಟಾಕಿಗಳನ್ನು ಮಾರಾಟ ಮಾಡಬೇಕು. ಸರಣಿ ಸ್ಫೋಟಕ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಮಾಡಬಾರದೆಂದು ಸಹ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 


LEAVE A REPLY

Please enter your comment!
Please enter your name here