ಸರಣಿ ಅಪಘಾತ ಸ್ವಲ್ಪದರಲ್ಲೇ ಪಾರಾದ ಸಿದ್ದರಾಮಯ್ಯ

0
127

ಮಂಡ್ಯ:

      ಬಾದಾಮಿ ಶಾಸಕ ಹಾಗೂ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು  ಭೇಟಿ ನಿಮ್ಮಿತ್ತ ಅವರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಬೆಂಗಾವಲು ವಾಹನಕ್ಕೆ ಶ್ರೀರಂಗಪಟ್ಟಣದ ಗೌಡಹಳ್ಳಿ ಬಳಿ ಅಪಘಾತವಾಗಿದೆ.

       ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ನಾಲ್ಕು ವಾಹನಗಳಿಗೆ ಸರಣಿ ಅಪಘಾತವಾಗಿದೆ ಎಂದು ವರದಿ ಬಂದಿದೆ .

       ಮೊದಲಿಗೆ ಸಿದ್ದರಾಮಯ್ಯ ಅವರಿದ್ದ ಕಾರನ್ನು ಹಿಂಬಾಲಿಸುತ್ತಿದ್ದ  ಇನೋವಾ ಕಾರಿಗೆ ಸಣ್ಣದಾಗಿ ಅಪಘಾತ ಸಂಭವಿಸಿದೆ.  ಬಳಿಕ ಬೇರೆ ಕಾರುಗಳು ಸೇರಿದಂತೆ ನಾಲ್ಕು ವಾಹನಗಳಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಸಿದ್ದರಾಮಯ್ಯ ಸುರಕ್ಷಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here