ಸೋಲಿನ ಹೊಣೆ ನಾನೆ ಹೊರುತ್ತೇನೆ‌: ರಾಮುಲು

0
78

 

ಬಳ್ಳಾರಿ:

           ನಾನೇ ಸೋಲಿನ ಹೊಣೆ ಹೊರುತ್ತೇನೆ‌. ಜಿಲ್ಲೆಯ ಜನರು ನನಗೆ ಸಹಕಾರ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಇತರ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದವರ ಪ್ರಾಬಲ್ಯವಿತ್ತು. ಹೀಗಾಗಿ ಗೆದ್ದಿದ್ದಾರೆ.

      ಬಳ್ಳಾರಿ ಕ್ಷೇತ್ರದ ಸೋಲು ನಮಗಾದ ಹಿನ್ನಡೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.ಭಗವಂತ ಫಲಕೊಟ್ಟಿಲ್ಲ. ಉಗ್ರಪ್ಪ ಸರ್ಕಾರ ದುರುಪಯೋಗ ಮಾಡಿಕೊಂಡಿದ್ದಾರೆ .ಸೋತಿದ್ದೇನೆಂದು ಯಾರನ್ನೂ ದ್ವೇಷಿಸಲ್ಲ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ ಎಂದರು.

         ಅಲ್ಲದೆ ಜನರು ನನ್ನನ್ನು ತಿರಸ್ಕರಿಸಿದ್ದು, ಇದು ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here