ಭಾರತೀಯ ವಾಯುಪಡೆಗೆ 86 ನೇ ವಾರ್ಷಿಕೋತ್ಸವದ ಸಂಭ್ರಮ

ನವದೆಹಲಿ: 

      ಭಾರತೀಯ ವಾಯು ಪಡೆ 86 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸಿಬ್ಬಂದಿಯ ನಿರಂತರ ಪರಿಶ್ರಮ, ಮಹೋನ್ನತ ತ್ಯಾಗಗಳಿಗೆ ಇದು ಸಾಕ್ಷಿಯಾಗಿದೆ ಎಂದು ರಕ್ಷಿಣಾ ಸಚಿವಾಲಯ ತಿಳಿಸಿದೆ.

      ಏರ್​ಫೋರ್ಸ್​ ವಾರ್ಷಿಕೋತ್ಸವದ ನಿಮಿತ್ತ ಉತ್ತರ ಪ್ರದೇಶದ ಗಾಜಿಯಾಬಾದ್​ನ ಹಿಂದೋನ್​ನಲ್ಲಿರುವ ಏರ್​ಪೋರ್ಸ್​ ಸ್ಟೇಷನ್​ನಲ್ಲಿ ಅದ್ದೂರಿ ಪರೇಡ್​ ಹಮ್ಮಿಕೊಳ್ಳಲಾಗಿದೆ.

      ಪರೇಡ್​ನಲ್ಲಿ ವಾಯುಪಡೆಯ ವಿವಿಧ ವಿಮಾನಗಳು, ಜಾಗ್ವಾರ್​, ಬಿಸನ್​, ಮಿಗ್​-29, ಮಿರಾಜ್​-2000, ಸುಖೋಯ್​-30 ಎಂಕೆಐ ಯುದ್ಧ ವಿಮಾನಗಳು, ರುದ್ರ ಹೆಲಿಕಾಪ್ಟರ್​ಗಳು ಚಮತ್ಕಾರಿ ವಾಯುಯಾನ ಪ್ರದರ್ಶನ , ಹಾಗೇ ಶಸ್ತ್ರಾಸ್ತ್ರ, ರಾಡಾರ್​, ಕ್ಷಿಪಣಿ ವ್ಯವಸ್ಥೆಗಳನ್ನೂ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

      ಭಾರತೀಯ ವಾಯುಪಡೆಯು 1932ರಲ್ಲಿ ರಾಯಲ್​ ಇಂಡಿಯಾ ಏರ್​ ಫೋರ್ಸ್​ ಎಂಬ ಹೆಸರಿನಿಂದ ಹುಟ್ಟಿಕೊಂಡಿತು. ನಂತರ 1950ರಲ್ಲಿ ಇಂಡಿಯನ್​ ಏರ್​ಫೋರ್ಸ್​ ಎಂದು ಬದಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap