ಶಶಿ ಸೋಪ್ ಮಾಲೀಕನ ಮೇಲೆ ಐಟಿ ದಾಳಿ!!

0
64

ದಾವಣಗೆರೆ:

     ದಾವಣಗೆರೆ ಉದ್ಯಮಿ, ಶಶಿ ಸೋಪ್ಸ್ ಇಂಡಸ್ಟ್ರೀಸ್ ನ ಮಾಲಿಕ ರವಿರಾಜ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.  

      ಗೋವಾ ಮೂಲದ ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಇಂದು(ಗುರುವಾರ) ಬೆಳಗ್ಗೆಯಿಂದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. 

      ರವಿರಾಜ್ ಹಾಗೂ ಅವರ ಪತ್ನಿ ಲಲಿತಾಗೆ ಸೇರಿರುವ ಮಹಾರಾಜ ಸೋಪ್ಸ್ ಇಂಡಸ್ಟ್ರೀಸ್ , ಎರಡು ಲಲಿತಾ ಇಂಟರ್‌ನ್ಯಾಷನಲ್ ಸ್ಕೂಲ್, ಟಿವಿಎಸ್ ಷೋರೂಂ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರವಿರಾಜ್ ಹಾಗೂ ಆತನ ಪತ್ನಿ ಕೋಟಿ ರೂಪಾಯಿ ಮೌಲ್ಯದ ಆಸ್ತಿ, ಹಣ, ಕಾರ್ಖಾನೆ, ಸ್ಕೂಲ್ ಗಳನ್ನ ಹೊಂದಿದ್ದು ತೆರಿಗೆ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

       ರವಿರಾಜ್ ದಾವಣಗೆರೆಯ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿದ್ದು, ಪ್ರಮುಖ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here