ಜೆಡಿಎಸ್ ಪಕ್ಷ ನನ್ನ ಮನೆಯ ಆಸ್ತಿಯಲ್ಲ !!

0
17

ಹಾಸನ:

     ಜೆಡಿಎಸ್ ಪಕ್ಷ ನನ್ನ ಮನೆಗೆ ಸೇರಿದ್ದಲ್ಲ ಎಲ್ಲರಿಗೂ ಸೇರಿದ್ದು ಎಂದು ಹಿರಿಯ ಜೆಡಿಎಸ್ ವಕ್ತಾರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ತಿಳಿಸಿದ್ದಾರೆ.

     ಹಾಸನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರು ಸೊಸೆ ಮನೆಯವರಿಗೆ ಮಾತ್ರ ಟಿಕೆಟ್ ಕೊಡುತ್ತಾರೆ ಎಂದು ಹೇಳುತ್ತಾರೆ. ಆದರೆ ನಾನು ಹಾಗೆ ಮಾಡಿಲ್ಲ. ಯಾರು ಬೇಕಾದರೂ ಮುಂದೆ ಬನ್ನಿ ಟಿಕೆಟ್ ನೀಡುತ್ತೇನೆ, ಸ್ಪರ್ಧಿಸಿ ಗೆಲ್ಲಿ. ದೇವೇಗೌಡ ಕುಟುಂಬ ಮಾತ್ರ ಬದುಕಬೇಕು ಎಂದು ಪಕ್ಷ ಮಾಡಿಲ್ಲ. ಪಕ್ಷ ಎಲ್ಲರ ಸ್ವತ್ತು. ಈ ಪಕ್ಷ ನನ್ನ ಮನೆ ಆಸ್ತಿ ಅಲ್ಲ. ಎಂದರು.

      ನಮ್ಮದು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾರೆ. ನಾನು ವಿಶ್ವನಾಥ್‌ ಅವರನ್ನು ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಅದಕ್ಕೆ ಮುಂಚೆ ಕೃಷ್ಣಪ್ಪ,ಸಿದ್ದರಾಮಯ್ಯ ಇಬ್ರಾಹಿಂ ಮಿರಾಜುದ್ದೀನ್‌ ಪಟೇಲ್‌ರನ್ನು  ಅಧ್ಯಕ್ಷರನ್ನಾಗಿ ಮಾಡಲಿಲ್ಲವೆ ಎಂದು ಪ್ರಶ್ನಿಸಿದರು. 

      ಮೈತ್ರಿ ಸರ್ಕಾರ ಅಪಾಯಕ್ಕೆ ಸಿಲುಕಲು ಬಿಡುವುದಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದಾಗ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಿದ್ದೇನೆ. ಸತತ 2 ದಿನದಿಂದ ಸಿದ್ದರಾಮಯ್ಯರ ಜತೆ ಮಾತನಾಡಿದ್ದೇನೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here