ನಮ್ಮಲ್ಲಿ ಹರಿಯುತ್ತಿರುವುದು ಟಿಪ್ಪು ರಕ್ತವಲ್ಲ, ಭಾರತಾಂಬೆಯ ರಕ್ತ

0
23

ಬಾಗಲಕೋಟೆ:

     ‘ನಮ್ಮಲ್ಲಿ ಯಾರ ಮೈಯಲ್ಲೂ ಟಿಪ್ಪು ರಕ್ತ ಹರಿಯುತ್ತಿಲ್ಲ.‌ ಬದಲಿಗೆ ಭಾರತಾಂಬೆ, ಸ್ವಾತಂತ್ರ್ಯ ಹೋರಾಟಗಾರರ ರಕ್ತ ಹರಿಯುತ್ತಿದೆ. ಆದ್ರೆ ಯಾಕೆ ಸರ್ಕಾರ ಈ ವಿಚಾರವನ್ನು ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ಟಿಪ್ಪು  ಜಯಂತಿ ಆಚರಣೆ ಆರಂಭದಿಂದಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಕಳಸಕೊಪ್ಪ ಗ್ರಾಮದ ತುಂಬಿದ ಕೆರೆಗೆ ಬಾಗಿನ ಸಲ್ಲಿಸಿದ ನಂತರ ಮಾತನಾಡಿ, ಟಿಪ್ಪು ಜಯಂತಿ ಮಾಡಿ ಎಂದು ಯಾರೂ ಹೇಳಿಲ್ಲ.   ಕಳೆದ ಟಿಪ್ಪು ಜಯಂತಿ ವೇಳೆ ನಡೆದ ಗಲಾಟೆ ವೇಳೆ ಮೃತಪಟ್ಟಿದ್ದ ವ್ಯಕ್ತಿ ಮನೆಗೆ ಹೋಗಿದ್ದಾಗ ಟಿಪ್ಪು ಜಯಂತಿ ಆಚರಿಸುವುದಿಲ್ಲ  ಎಂದು ಕುಮಾರಸ್ವಾಮಿ ಹೇಳಿದ್ದರು ಎಂದರು.

      ‘ನಾಳೆ ಪಕ್ಷದ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ ಮಾಡುತ್ತೇವೆ. ಈಗ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ನಿಲುವೇ ಇಲ್ಲ. ಎಲ್ಲಿಯವರೆಗೆ ಸರ್ಕಾರ ನಡೆಯುತ್ತೆ ನೋಡೋಣ. ಒಳ್ಳೆಯದೋ ಕೆಟ್ಟದ್ದೋ ನಡೆದುಕೊಂಡು ಹೋಗ್ತಿದೆ’ ಎಂದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here