ಸಾಲ ಪ್ರಕರಣ ವರ್ಗಾವಣೆಗೆ ಸಮ್ಮತಿ

0
33

ಬೆಳಗಾವಿ:

      ಸಾಲದ ಹಿನ್ನೆಲೆಯಲ್ಲಿ ರೈತರ ವಿರುದ್ಧ ಕೋಲ್ಕತ್ತ ಸ್ಥಳೀಯ ನ್ಯಾಯಾಲಯದಲ್ಲಿ ಹೂಡಿರುವ ಎಲ್ಲ ಪ್ರಕರಣಗಳನ್ನು ಸ್ಥಳೀಯ ನ್ಯಾಯಾಲಯಗಳಿಗೆ ವರ್ಗಾಯಿಸಲು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದ್ದಾರೆ.

        ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚನೆಯಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಮತ್ತು ರೈತ ಮುಖಂಡರ ಜತೆ ಬುಧುವಾರ ನಡೆಸಿದ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಬ್ಯಾಂಕ್ ದಾಖಲಿಸಿರುವ ಸುಮಾರು 25-30 ಪ್ರಕರಣಗಳು ರಾಜ್ಯದ ಸಾಲಮನ್ನಾ ಯೋಜನಾ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಕಾನೂನು ಕ್ರಮ ಕೈಬಿಡಲು ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದ್ದಾರೆ. ಟ್ರ್ಯಾಕ್ಟರ್ ಖರೀದಿ ಕೃಷಿ ಯಂತ್ರೋಪಕರಣ ಖರೀದಿ, ಜಮೀನು ಅಭಿವೃದ್ಧಿ ಮುಂತಾದ ಉದ್ದೇಶಗಳಿಗೆ ಪಡೆದಿರುವ ಸಾಲಗಳ ಸಂಬಂಧ ಒನ್‍ಟೈಮ್ ಸೆಟ್ಲಮೆಂಟ್‍ಗೆ ರೈತರು ಹಾಗೂ ಅಧಿಕಾರಿಗಳು ಸಮ್ಮತಿಸಿದರು. ಈ ಪ್ರಕರಣಗಳ ವಿಲೇವಾರಿಗೆ ನಾಲ್ಕು ತಾಲೂಕುಗಳಲ್ಲಿ ಎಸಿಗಳ ನೇತೃತ್ವದಲ್ಲಿ ಅದಾಲತ್ ನಡೆಸಲು ತೀರ್ಮಾನಿಸಲಾಯಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here