ಜನಾರ್ಧನ ರೆಡ್ಡಿ ಬಂಧನಕ್ಕೆ ತೀವ್ರ ಶೋಧ

ಬೆಂಗಳೂರು

       ದೇವರ ಜೀವನಹಳ್ಳಿಯ ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಸಂಸ್ಥೆಯ ವಂಚನೆ ಪ್ರಕರಣದಲ್ಲಿಚಿಬ್ಬರನ್ನು ಬಂಧಿಸಿರುವ ಕೇಂಧ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಪ್ರಮುಖ ಆರೋಪಿ ಮಾಜಿ ಸಚಿವ ಗಣಿಧಣಿ ಜನಾರ್ಧನ ರೆಡ್ಡಿ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.

       ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಸಂಸ್ಥೆಯ ವಂಚನೆಯಲ್ಲಿ ಒಳಗಾಗಿರುವ ಸಾರ್ವಜನಿಕರು ನೀಡಿದ ದೂರುಗಳ ತನಿಖೆಯನ್ನು ವರ್ಗಾವಣೆಗೊಂಡ ನಂತರ ವಿಶೇಷ ತಂಡಗಳು ಆರೋಪಿ ಸೈಯದ್ ಅಹಮದ್ ಫರೀದ್ ಹಾಗೂ ರಾಜ್‍ಮಹಲ್ ಪ್ಯಾನ್ಸಿ ಜುವೆಲರ್ಸ್‍ನ ರಮೇಶ್‍ನನ್ನು ಬಂಧಿಸಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಅಪ್ತ ಅಲಿಖಾನ್‍ಬಂಧನಕ್ಕೆ ತೀವ್ರ ಶೋಧ ನಡೆಸಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

       ಈ ನಡುವೆ ಅಲಿಖಾನ್‍ಗೆ ನಗರದ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದ್ದು ನರೆಯ ತೆಲಂಗಾಣಕ್ಕೆ ಪರಾರಿಯಾಗಿರುವ ಜನಾರ್ಧನ ರೆಡ್ಡಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

        ಆರೋಪಿ ಸೈಯದ್ ಅಹಮದ್ ಫರೀದ್ ವಿಚಾರಣೆಗೊಳಪಡಿಸಿದಾಗ ಈತ ಸಾರ್ವಜನಿಕರಿಂದ ಕೋಟ್ಯಾಂತರ ರೂ ಹಣವನ್ನು ಸಂಗ್ರಹಿಸಿ ಹಲವಾರು ಜನರ ಬಳಿ ಹೂಡಿಕೆ ಮಾಡಿರುವುದಾಗಿ ಮತ್ತು ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಈತನ ಕಛೇರಿ ಮತ್ತು ಮನೆಗಳ ಮೇಲೆ ಇ.ಡಿ. ಇಲಾಖೆಯಿಂದ ದಾಳಿ ನಡೆದು ಈತನ ಬ್ಯಾಂಕ್‍ನ ಹಣಕಾಸಿನ ವ್ಯವಹಾರಗಳನ್ನು ಸ್ಥಗಿತ ಮಾಡಲಾಗಿರುತ್ತದೆ ಎಂದು ಹೇಳಿದರು.

        ಆರೋಪಿ ಸೈಯದ್ ಅಹಮದ್ ಫರೀದ್ ತನ್ನ ವಿರುದ್ದ ಇ.ಡಿ. ಯಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸಹಾಯಕ ಕೋರಿ ಜನಾರ್ದನರೆಡ್ಡಿ ಹಾಗೂ ಆತನ ಆಪ್ತ ಆಲಿಖಾನ್ ರವರೊಂದಿಗೆ ಸಭೆ ನಡೆಸಿ, ಇದಕ್ಕಾಗಿ 20 ಕೋಟಿ ರೂ ಹಣವನ್ನು ನೀಡುವುದಾಗಿ ಮಾತುಕತೆ ಮಾಡಿರುತ್ತಾರೆ. ಇದೇ ಸಮಯದಲ್ಲಿ ಒಪ್ಪಂದ ಪ್ರಕಾರ 20 ಕೋಟಿ ರೂ ಹಣವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ಧನರೆಡ್ಡಿಯು ಷರತ್ತು ವಿಧಿಸಿದ್ದು, ಅದರಂತೆ ಆರೋಪಿ ಸೈಯದ್ ಅಹಮ್ಮದ್ ಫರೀದನು ಜನಾರ್ಧನರೆಡ್ಡಿಯ ಆಪ್ತ ಅಲಿಖಾನ್‍ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಪ್ಯಾನ್ಸಿ ಜುವೆಲ್ಲರ್ಸ್‍ನ ರಮೇಶ್ ಎಂಬುವವರ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್‍ನ ರಮೇಶ್ ಕೊಠಾರಿ ರವರ ಬಳಿ 18 ಕೋಟಿ ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿ ಮಾಡಿ ಅದನ್ನು ಜನಾರ್ಧನರೆಡ್ಡಿ ರವರಿಗೆ ತಲುಪಿಸಿರುವ ಅಂಶ ಇದುವರೆಗಿನ ತನಿಖೆಯಿಂದ ತಿಳಿದುಬಂದಿರುತ್ತದೆ.

         ಈ ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜ್‍ಮಹಲ್ ಪ್ಯಾನ್ಸಿ ಜುವೆಲರ್ಸ್‍ನ ರಮೇಶ್‍ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹಲವು ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಂಡಿರುತ್ತಾರೆ. ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಜನಾರ್ಧನರೆಡ್ಡಿ ಮತ್ತು ಆಲಿಖಾನ್ ರವರ ಪತ್ತೆ ಕಾರ್ಯ ಮುಂದುವರೆದಿದ್ದು, ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿ ರವರುಗಳಾದ ಪಿ.ಟಿ. ಸುಬ್ರಮಣ್ಯ, ಮರಿಯಪ್ಪ, ಮೋಹನ್‍ಕುಮಾರ್, ಮಂಜುನಾಥ ಚೌಧರಿ ರವರುಗಳ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್ ಕುಮಾರ್,ಉಪ ಪೊಲೀಸ್ ಆಯುಕ್ತ ಗಿರೀಶ್.ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಅ್ಯಂಬಿಡೆಂಟ್ ಹಿನ್ನಲೆ

        ಅ್ಯಂಬಿಡೆಂಟ್‍ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿ ಈ ಕಂಪನಿಯ ಕಚೇರಿಯಿದ್ದು, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿತ್ತು. ಪ್ರತಿ ಗ್ರಾಹಕರಿಂದ ಕನಿಷ್ಠ ಹೂಡಿಕೆ ಒಂದು ಲಕ್ಷ ರೂ. ಪಡೆಯುತ್ತಿತ್ತು. 1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡದಾಗಿ ಗ್ರಾಹಕರನ್ನು ನಂಬಿಸಿತ್ತು. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ ಹೊಡಿದ್ದನು.
ರೆಡ್ಡಿ ಮನೆಗಳ ಮೇಲೆ ದಾಳಿ

         ಅಮಾನ್ಯಗೊಂಡ ನೋಟುಗಳ ವರ್ಗಾವಣೆ ಸಂಬಂಧ ಇಂದು ಮುಂಜಾನೆಯಿಂದಲೇ ಬೆಂಗಳೂರಿನ ಪಾರಿಜಾತ ಅಪಾರ್ಟ್‍ಮೆಂಟ್, ಟ್ವಿನ್ ಟವರ್, ಮೊಳಕಾಲ್ಮೂರಿನ ತೋಟದ ಮನೆ, ಬಳ್ಳಾರಿ, ಚಿತ್ರದುರ್ಗ, ಹೈದ್ರಾಬಾದ್‍ಗಳಲ್ಲಿ ಪೊ3ಡಲೀಸರು ಶೋಧ ನಡೆಸಿದ್ದಾರೆ.
ಶಾಸಕರ ಖರೀದಿಗೆ ಯತ್ನ

         ಜೆಡಿಎಸ್‍ನ ಇಬ್ಬರು ಶಾಸಕರಾದ ಶಿರಾದ ಸತ್ಯನಾರಾಯಣ್ ಹಾಗೂ ಪಿರಿಯಾಪಟ್ಟಣ ಶಾಸಕ ಮಹದೇವ್ ಅವರನ್ನು ಬಿಜೆಪಿ ನಾಯಕರು ಆಪರೇಷನ್ ಕಮಲ ನಡೆಸಲು ಸಂಪರ್ಕಿಸಿದ್ದು, ಕೋಟಿ ಕೋಟಿ ಹಣದ ಆಫರ್ ನೀಡಿದ್ದಾರೆ. ಈ ಹಣವನ್ನು ಹೊಂದಿಸಲು ಜನಾರ್ಧನರೆಡ್ಡಿ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಗಳವಾರವಷ್ಟೇ ಸುಳಿವು ನೀಡಿರುವ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ನಡೆದಿದೆ ಎಂದು ತಿಳಿದುಬಂದಿದೆ

        ಅಮಾನ್ಯಗೊಂಡ ನೋಟುಗಳ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಕೋಟಿ ಅವ್ಯವಹಾರ ನಡೆಸಿರುವ ಪ್ರಕರಣ ಸಂಬಂಧ ಜನಾರ್ಧನರೆಡ್ಡಿ ಅವರನ್ನು ಶೀಘ್ರ ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಲು ನಿರ್ಧರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap