ಬೆಂಗಳೂರು-ಮಂಗಳೂರು ರೈಲ್ವೇ ಸಂಚಾರ ಪುನಃ ಆರಂಭ

ಮಂಗಳೂರು:Related image

       ಬುಧವಾರ (ಅ.11)ಬೆಂಗಳೂರಿನಿಂದ ಮಂಗಳೂರು ಕಡೆಗೆ ರೈಲು ಸಂಚಾರ ಆರಂಭಿಸಿದೆ. ಇದರಿಂದಾಗಿ ಕೊನೆಗೂ ಸಂಚಾರ ಆರಂಭಗೊಂಡಂತಾಗಿದೆ.

      ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯಲ್ಲಿ ಭೂಕುಸಿತ ಉಂಟಾಗಿತ್ತು. ಇದರಿಂದ ರೈಲು ಸಂಚಾರ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಆದರೆ ರೈಲ್ವೆ ಇಲಾಖೆ ಸಮರೋಪಾಧಿಯಲ್ಲಿ ದುರಸ್ತಿ ಕಾರ್ಯ ನಡೆಸಿದ ಕಾರಣ ಒಂದುವರೆ ತಿಂಗಳ ಬಳಿಕ ಮತ್ತೆ ರೈಲು ಸಂಚಾರ ಅರಂಭವಾಗಿದೆ.

      ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಪುನಾರಂಭಗೊಂಡಿದ್ದು, ಕಾರವಾರ- ಕಣ್ಣೂರು -ಕೆಎಸ್‌ಆರ್ ಬೆಂಗಳೂರು ರೈಲು ಇಂದು ಗುರುವಾರ ಅ.11. ಸಂಚಾರ ಆರಂಭಿಸಲಿದೆ. ಇದೇ 12ರಿಂದ ಯಶವಂತಪುರ-ಕಾರವಾರ ಎಕ್ಸ್ ಪ್ರೆಸ್ ರೈಲು ಮುಂಜಾನೆ 7.10ಕ್ಕೆ ಯಶವಂತಪುರದಿಂದ ಹೊರಡಲಿದೆ.

      ಅದಕ್ಕೆ ಪರ್ಯಾಯವಾಗಿ ಅಕ್ಟೋಬರ್ 12ರಿಂದ ಕಾರವಾರದಿಂದ ರೈಲು ಬೆಂಗಳೂರಿಗೆ ಸಂಚರಿಸಲಿದೆ. ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಅಕ್ಟೋಬರ್ 1ರಂದು ಭೂಕುಸಿತವಾದ ಕಡೆಗಳಲ್ಲಿ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಸಿ, ಈ ಮಾರ್ಗದಲ್ಲಿ ಗೂಡ್ಸ್ ರೈಲು ಓಡಿಸಿ ಪರಿಕ್ಷೆ ನಡೆಸಿತ್ತು. ರೈಲು ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ವರದಿ ಹಿನ್ನೆಲೆಯಲ್ಲಿ ಈಗ ಮಂಗಳೂರು- ಬೆಂಗಳೂರು ನಡುವೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap