ರೇವಣ್ಣರ ಅಧಿಕಾರ ಶಾಶ್ವತ..!

0
42

ಹಾಸನ: 

      ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ರವರು ಶಾಸಕರಾಗಿ ಗೆಲ್ಲುತ್ತಲೇ ಇರುತ್ತಾರೆ,  ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಸಚಿವೆ ಹಾಗು ನಟಿ ಜಯಮಾಲಾ ಸಚಿವರನ್ನು ಹೊಗಳಿದ್ದಾರೆ. 

      ಶ್ರವಣಬೆಳಗೊಳದಲ್ಲಿ ಚಾರೂಕೀರ್ತಿ ಭಟ್ಟಾರಕ‌ ಸ್ವಾಮಿಗಳಿಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರಧಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವೆ ಜಯಮಾಲಾ ಸಮಾರಂಭದಲ್ಲಿ ಮಾತನಾಡುತ್ತಾ ರೇವಣ್ಣ ಅವರ ಅಭಿವೃದ್ಧಿ ಕಾರ್ಯಗಳನ್ನು ಬಣ್ಣಿಸಿದರು.

      ರೇವಣ್ಣ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಸೂಪರ್​ ಸಿಎಂ ಎಂಬಂತೆ ವರ್ತಿಸುತ್ತಾರೆ ಎಂಬುದು ಅವರ ಮೇಲಿರುವ ಸಾಮಾನ್ಯ ಆರೋಪ. ಆದರೆ ರೇವಣ್ಣ ಅವರು ಜನರಿಗೆ ಏನು ಬೇಕೋ ಅದನ್ನು ಅರ್ಥಮಾಡಿಕೊಂಡು ಹಾಸನದಲ್ಲಿ ತಮ್ಮದೇ ‌ಸಾಮ್ರಾಜ್ಯ ಕಟ್ಟಿದ್ದಾರೆ. ಹಾಸನದ ಅಬಿವೃದ್ಧಿ, ಇಲ್ಲಿನ ಶುಚಿತ್ವ ನೋಡಿದರೆ ಗೊತ್ತಾಗುತ್ತೆ ರೇವಣ್ಣ ಎಷ್ಟು ಕೆಲಸ ಮಾಡಿದ್ದಾರೆ ಎಂದು. ಯಾವುದೇ ಸರ್ಕಾರವಿದ್ದರೂ, ರೇವಣ್ಣ ಬದುಕಿರುವವರೆಗೆ ಶಾಸಕರಾಗಿ ಗೆಲ್ಲುತ್ತಲೇ ಇರುತ್ತಾರೆ,  ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಸಚಿವೆ ಜಯಮಾಲ ಹೇಳಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here